ADVERTISEMENT

ಇ-ಕೇಟರಿಂಗ್ ಸೇವೆಗೆ ರೈಲ್ವೆ ಅನುಮತಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 14:36 IST
Last Updated 17 ಜನವರಿ 2021, 14:36 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ರೈಲುಗಳಲ್ಲಿ ಇ-ಕೇಟರಿಂಗ್ ಸೇವೆಗಳನ್ನು ಪುನರಾರಂಭಿಸಲು ಭಾರತೀಯ ರೈಲ್ವೆ ಅನುಮತಿ ನೀಡಿದೆ.

‘ಕೇಂದ್ರ ಮತ್ತು ರಾಜ್ಯ ಸರ್ಕಾರ ಹೊರಡಿಸಿರುವ ಆರೋಗ್ಯ ಮತ್ತು ಸುರಕ್ಷತಾ ಮಾರ್ಗಸೂಚಿಗಳ ಅನುಸಾರವಾಗಿಯೇ ಇ–ಕೇಟರಿಂಗ್‌ ಸೇವೆ ಒದಗಿಸಲಾಗುವುದು’ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ಆಯ್ದ ರೈಲ್ವೆ ನಿಲ್ದಾಣಗಳಲ್ಲಿ ಇ– ಕೇಟರಿಂಗ್ ಪುನರಾರಂಭಿಸಲು ಅನುಮತಿ ನೀಡುವಂತೆಈ ಹಿಂದೆ ಐಆರ್‌ಸಿಟಿಸಿ, ರೈಲ್ವೆ ಮಂಡಳಿಗೆ ಪತ್ರ ಬರೆದಿತ್ತು.

ADVERTISEMENT

ಕೋವಿಡ್‌–19 ನಿಯಂತ್ರಣಕ್ಕಾಗಿ ರೈಲ್ವೆ ಇ–ಕೇಟರಿಂಗ್‌ ಸೇವೆಯನ್ನು ಸ್ಥಗಿತಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.