ADVERTISEMENT

ರೈಲ್ವೆ ಹಳಿ ಜಲಾವೃತ ತಡೆಗೆ ಮೇಲ್ಸೇತುವೆಗೆ ಮೊರೆ

ಪಿಟಿಐ
Published 6 ಏಪ್ರಿಲ್ 2022, 11:31 IST
Last Updated 6 ಏಪ್ರಿಲ್ 2022, 11:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ(ಪಿಟಿಐ): ರೈಲ್ವೆ ಮಾರ್ಗಗಳು ಜಲಾವೃತವಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ರೈಲ್ವೆ ಮಾರ್ಗಗಳನ್ನು ರಸ್ತೆಗಳಡಿಯಲ್ಲಿ ನಿರ್ಮಿಸುವ ಬದಲಿಗೆ ಮೇಲ್ಸೇತುವೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಬುಧವಾರ ಪ್ರಶ್ನೋತ್ತರ ವೇಳೆ ಮಾತನಾಡಿದ ಅವರು, 'ರೈಲ್ವೆ ಹಳಿಯ ಮೇಲ್ಸೇತುವೆ ಯೋಜನೆಗಳಿಗೆ ರಸ್ತೆಯ ಅಡಿ ರೈಲ್ವೆ ಹಳಿ ನಿರ್ಮಾಣಕ್ಕಿಂತಲೂ ಹೆಚ್ಚು ವೆಚ್ಚವಾಗುತ್ತದೆ. ಆದಾಗ್ಯೂ, ಸಾಮಾನ್ಯವಾಗಿ ಉದ್ಭವವಾಗುವ ಜಲಾವೃತ ಸಮಸ್ಯೆಯನ್ನು ತಡೆಯಲು ಈಗಿರುವ ರಸ್ತೆಯ ಅಡಿಯ ರೈಲ್ವೆ ಯೋಜನೆಗಳನ್ನು ಸಾಧ್ಯವಿರುವಷ್ಟು ಮೇಲ್ಸೇತುವೆಗಳನ್ನಾಗಿ ಪರಿವರ್ತಿಸಲಾಗುತ್ತಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT