ADVERTISEMENT

ದೆಹಲಿಯ ಹಲವು ಭಾಗಗಳಲ್ಲಿ ಆಲಿಕಲ್ಲು ಸಹಿತ ಮಳೆ

ಪಿಟಿಐ
Published 6 ಜನವರಿ 2021, 5:22 IST
Last Updated 6 ಜನವರಿ 2021, 5:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದಕ್ಷಿಣ ದೆಹಲಿಯ ಹಲವೆಡೆ ಬುಧವಾರ ಬೆಳಿಗ್ಗೆ 7.30ರ ಸುಮಾರಿಗೆ ಆಲಿಕಲ್ಲು ಸಹಿತ ಮಳೆ ಸುರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ದೆಹಲಿಯ ಇನ್ನೂ ಕೆಲವೆಡೆ ಬುಧವಾರ ಆಲಿಕಲ್ಲು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮುನ್ನೆಚ್ಚರಿಕೆ ನೀಡಿದೆ.

ದೆಹಲಿಯಲ್ಲಿ ಮಂಗಳವಾರ ಸಂಜೆ 5.30ರ ತನಕ 1.3 ಮಿ.ಮೀ ಮಳೆ ಸುರಿದಿದೆ. ಪಾಲಂ, ಲೋಧಿ ಮತ್ತು ರಿಡ್ಜ್ ರಸ್ತೆಯಲ್ಲಿ ಕ್ರಮವಾಗಿ 5.3 ಮಿ.ಮೀ, 0.4 ಮಿ.ಮೀ ಮತ್ತು 4.8 ಮಿ.ಮೀ ಮಳೆ ಸುರಿದಿದೆ ಎಂದು ಸಫ್ದರ್ಜಂಗ್ ವೀಕ್ಷಣಾಲಯವು ಹೇಳಿದೆ.

ADVERTISEMENT

ಆದರೆ ದೆಹಲಿಯ ಕನಿಷ್ಠ ತಾಪಮಾನವು 13.2 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದ್ದು, ಗರಿಷ್ಠ ತಾಪಮಾನ 20.8 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.