ADVERTISEMENT

ಪುಣೆ: ಅತಿವೃಷ್ಟಿ, ಪ್ರವಾಹ 17 ಸಾವಿರ ಜನರ ಸ್ಥಳಾಂತರ

ಪಿಟಿಐ
Published 16 ಅಕ್ಟೋಬರ್ 2020, 7:16 IST
Last Updated 16 ಅಕ್ಟೋಬರ್ 2020, 7:16 IST
ಪಂಡರಾಪುರದಲ್ಲಿ ಗುರುವಾರ ಮಳೆಯಿಂದ ಗೋಡೆ ಕುಸಿದಿರುವುದು (ಸಂಗ್ರಹ ಚಿತ್ರ)
ಪಂಡರಾಪುರದಲ್ಲಿ ಗುರುವಾರ ಮಳೆಯಿಂದ ಗೋಡೆ ಕುಸಿದಿರುವುದು (ಸಂಗ್ರಹ ಚಿತ್ರ)   

ಪುಣೆ: ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಹಲವು ಭಾಗ ಇನ್ನು ಜಲಾವೃತವಾಗಿದ್ದು, 17,000ಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಪಂಡರಾಪುರ ತಾಲ್ಲೂಕಿನಲ್ಲಿ ಪ್ರವಾಹಪೀಡಿತ 46 ಗ್ರಾಮಗಳಿಂದಸುಮಾರು 10 ಸಾವಿರಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಮಳೆ ಸಂಬಂಧಿತ ಅವಘಡಗಳಲ್ಲಿ ಸುಮಾರು 14 ಮಂದಿ ಸತ್ತಿದ್ದಾರೆ.

ಗುರುವಾರದಿಂದ ಮಳೆ ಪ್ರಮಾಣ ಕಡಿಮೆ ಆಗಿದೆ. ಆದರೆ, ಜಲಾಶಯಗಳಿಂದ ಹೆಚ್ಚಿನ ನೀರು ಹೊರಬಿಟ್ಟಿರುವ ಕಾರಣ ಪಂಡರಾಪುರ ತಾಲ್ಲೂಕಿನಲ್ಲಿ ಇನ್ನೂ ಪ್ರವಾಹ ಪರಿಸ್ಥಿತಿ ಇದೆ ಎಂದು ಉಪ ವಿಭಾಗಾಧಿಕಾರಿ ಸಚಿನ್ ಧೋಲೆ ತಿಳಿಸಿದ್ದಾರೆ.

ADVERTISEMENT

ಹಲವು ರಸ್ತೆ, ಸೇತುವೆಗಳ ಜಲಾವೃತವಾಗಿದ್ದು, ವಾಹನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ ಎಂದು ಅವರು ತಿಳಿಸಿದ್ದಾರೆ. ಮೊಹೊಲ್ ತಾಲ್ಲೂಕಿನಲ್ಲಿ ಸುಮಾರು 5,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಒಟ್ಟಾರೆ 18 ತಂಡಗಳು ಪ್ರವಾಹ ಪೀಡಿತವಾಗಿರುವ ಮಲ್ಶಿರಾಜ್, ದಕ್ಷಿಣ ಸೊಲ್ಲಾಪುರ ಮತ್ತು ಮೊಹೊಲ್ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.