ADVERTISEMENT

ಅಸಾರಾಂ ಜಾಮೀನು ಅರ್ಜಿ ತಿರಸ್ಕಾರ

ಪಿಟಿಐ
Published 21 ಫೆಬ್ರುವರಿ 2019, 20:19 IST
Last Updated 21 ಫೆಬ್ರುವರಿ 2019, 20:19 IST
ಅಸಾರಾಂ ಬಾಪು
ಅಸಾರಾಂ ಬಾಪು   

ಜೋಧಪುರ: ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪು ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್ ತಿರಸ್ಕರಿಸಿದೆ.

‘ಪತ್ನಿ ಲಕ್ಷ್ಮಿದೇವಿ ತೀವ್ರ ಅನಾರೋಗ್ಯಕ್ಕೊಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಐದು ವರ್ಷಗಳಿಂದ ನಿರಂತರವಾಗಿ ಜೈಲಿನಲ್ಲಿರುವುದರಿಂದ ಈಗ ಪತ್ನಿಯನ್ನು ಭೇಟಿ ಮಾಡಲು ಅವಕಾಶ ನೀಡಬೇಕು’ ಎಂದು ಅಸಾರಾಂ ತಮ್ಮ ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

ಅವರ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲರು, ಅಸಾರಾಂ ಪತ್ನಿ ಆರೋಗ್ಯವಾಗಿರುವ ಕುರಿತು ವೈದ್ಯಕೀಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ADVERTISEMENT

ದಾಖಲೆ ಹಾಗೂ ವಾದ ಮಂಡನೆ ಆಲಿಸಿದನ್ಯಾಯಮೂರ್ತಿ ಸಂದೀಪ್ ಮೆಹ್ತಾ,‘ಇಂತಹ ಅಪರಾಧಿಗಳ ಕುರಿತು ನ್ಯಾಯಾಲಯ ಕರುಣೆ ತೋರುವುದಿಲ್ಲ’ ಎಂದು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.