ADVERTISEMENT

ರಾಜಸ್ಥಾನ: ಅಪಹರಣಕ್ಕೊಳಗಾದ 38 ಮಹಿಳೆಯರು, ಮಕ್ಕಳ ರಕ್ಷಣೆ

ಏಜೆನ್ಸೀಸ್
Published 7 ಜನವರಿ 2021, 6:56 IST
Last Updated 7 ಜನವರಿ 2021, 6:56 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜಲ್ವಾರ್ (ರಾಜಸ್ಥಾನ): ರಾಜಸ್ಥಾನದ ಜಲ್ವಾರ್‌ನಲ್ಲಿ ಸುಮಾರು 100 ಜನರು ಅಪಹರಿಸಿರುವ 38 ಮಹಿಳೆಯರು ಹಾಗೂ ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಬುಧವಾರ ಮಾಹಿತಿ ನೀಡಿದ್ದಾರೆ.

ರಾಜಸ್ಥಾನದ ಜಲ್ವಾರ್‌ನ ಬಾಮನ್ ದೇವರಿಯನ್ ಗ್ರಾಮದ ಉನ್ಹೆರ್ ಪೊಲೀಸ್ ಠಾಣಾ ಪ್ರದೇಶದಲ್ಲಿ ಘಟನೆ ನಡೆದಿದೆ.

ಖಡ್ಗ ಸೇರಿದಂತೆ ಇತರೆ ಮಾರಕಾಯುಧಗಳೊಂದಿಗೆ ಗ್ರಾಮಕ್ಕೆ ಪ್ರವೇಶಿಸಿದ ಸುಮಾರು 100ರಷ್ಟು ಮಂದಿ, ಮಹಿಳೆಯರು ಹಾಗೂ ಮಕ್ಕಳನ್ನು ಅಪಹರಿಸಿದ್ದರು ಎಂದು ಜಲ್ವಾರ್ ಎಸ್‌ಪಿ ಡಾ. ಕಿರಣ್ ಕಾಂಗ್ ಸಿಂಧು ಮಾಹಿತಿ ನೀಡಿದ್ದಾರೆ.

ADVERTISEMENT

ಆರೋಪಿಗಳು ಮಧ್ಯಪ್ರದೇಶದ ರಟ್ಲಾಂ ಜಿಲ್ಲೆಯಿಂದ ಬಸ್ ಹಾಗೂ ಇತರ ವಾಹನಗಳ ಮೂಲಕ ಗ್ರಾಮಕ್ಕೆ ಬಂದಿದ್ದರು. ಅವರ ಬಳಿ ಚಾಕು, ಕತ್ತಿ ಸೇರಿದಂತೆ ಮಾರಕಾಯುಧಗಳು ಇದ್ದವು ಎಂದು ಜಲ್ವಾರ್ ಎಸ್‌ಪಿ ವಿವರಿಸಿದರು.

ಮಾಹಿತಿ ಲಭಿಸಿದ ತಕ್ಷಣ ಕಾರ್ಯಾಚರಣೆ ಆರಂಭಿಸಿದ ಪೊಲೀಸರು 38 ಮಹಿಳೆಯರು ಹಾಗೂ ಮಕ್ಕಳನ್ನು ರಕ್ಷಿಸಲು ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದ್ದು, ಮಾರಕಾಯುಧಗಳನ್ನು ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಐಪಿಸಿ ಅಡಿಯಲ್ಲಿ ದೂರು ದಾಖಲಿಸಿರುವ ಪೊಲೀಸರು, ಪರಾರಿಯಾದ ಇತರೆ ಆರೋಪಿಗಳನ್ನು ಬಂಧಿಸುವ ಪ್ರಯತ್ನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.