ADVERTISEMENT

ಲಖನೌ: ₹ 1,710 ಕೋಟಿ ಮೌಲ್ಯದ 180 ಅಭಿವೃದ್ಧಿ ಯೋಜನೆಗಳಿಗೆ ರಾಜನಾಥ್ ಸಿಂಗ್ ಚಾಲನೆ

ಪಿಟಿಐ
Published 31 ಆಗಸ್ಟ್ 2021, 9:26 IST
Last Updated 31 ಆಗಸ್ಟ್ 2021, 9:26 IST
ಲಖನೌನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ 180 ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿದರು          -ಟ್ವಿಟರ್‌ ಚಿತ್ರ
ಲಖನೌನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ 180 ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿದರು          -ಟ್ವಿಟರ್‌ ಚಿತ್ರ   

ಲಖನೌ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಮ್ಮ ಲೋಕಸಭಾ ಕ್ಷೇತ್ರವಾದ ಲಖನೌನಲ್ಲಿ ₹1,710 ಕೋಟಿಗೂ ಅಧಿಕ ಮೌಲ್ಯದ 180 ಅಭಿವೃದ್ಧಿ ಯೋಜನೆಗಳಿಗೆ ಮಂಗಳವಾರ ಚಾಲನೆ ನೀಡಿದರು.

‘ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಕ್ಷೇತ್ರವಾಗಿದ್ದ ಲಖನೌನಲ್ಲಿ ಅಭಿವೃದ್ಧಿಯನ್ನು ಖಾತ್ರಿಪಡಿಸುವ ಮೂಲಕ ರಾಜನಾಥ್‌ ಅವರು ವಾಜಪೇಯಿ ಕನಸನ್ನು ಈಡೇರಿಸುತ್ತಿದ್ದಾರೆ’ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ದಿನೇಶ್‌ ಶರ್ಮಾ ಹೇಳಿದರು.

ಲಖನೌಗೆ ಬೆಳಿಗ್ಗೆ ಆಗಮಿಸಿದ ರಾಜನಾಥ್‌ ಸಿಂಗ್‌ ಅವರು ಇಲ್ಲಿ ನಡೆದ ಸಮಾರಂಭದಲ್ಲಿ 90 ಯೋಜನೆಗಳನ್ನು ಉದ್ಘಾಟಿಸಿದರು ಮತ್ತು 90 ಯೋಜನೆಗಳಿಗೆ ಶಂಕು ಸ್ಥಾಪನೆ ಮಾಡಿದರು.

ADVERTISEMENT

ಇದು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ), ವೈದ್ಯಕೀಯ ಮತ್ತು ಆರೋಗ್ಯ, ನೀರಾವರಿ, ಲಖನೌ ಮಹಾನಗರ ಪಾಲಿಕೆ, ಲಖನೌ ಅಭಿವೃದ್ಧಿ ಪ್ರಾಧಿಕಾರ ಮತ್ತು ಸ್ಮಾರ್ಟ್ ಸಿಟಿ ಯೋಜನೆ ಸೇರಿದಂತೆ ಒಂಬತ್ತು ಇಲಾಖೆಗಳ ಅಭಿವೃದ್ಧಿ ಯೋಜನೆಗಳನ್ನು ಒಳಗೊಂಡಿದೆ.

ಈ ಸಮಾರಂಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಉಪ ಮುಖ್ಯಮಂತ್ರಿಗಳಾದ ದಿನೇಶ್‌ ಶರ್ಮಾ ಮತ್ತು ಕೇಶವ್‌ ಪ್ರಸಾದ್‌ ಮೌರ್ಯ ಸೇರಿದಂತೆ ಇತರೆ ಸಚಿವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.