ADVERTISEMENT

ಎನ್‌ಐಎ ಮಹಾನಿರ್ದೇಶಕರಾಗಿ ರಾಕೇಶ್‌ ಅಗ್ರವಾಲ್‌ ನೇಮಕ

ಪಿಟಿಐ
Published 14 ಜನವರಿ 2026, 18:48 IST
Last Updated 14 ಜನವರಿ 2026, 18:48 IST
<div class="paragraphs"><p>ರಾಕೇಶ್‌ ಅಗ್ರವಾಲ್‌</p></div>

ರಾಕೇಶ್‌ ಅಗ್ರವಾಲ್‌

   

ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಮಹಾನಿರ್ದೇಶಕರಾಗಿ (ಡಿಜಿ) ಐಪಿಎಸ್‌ ಅಧಿಕಾರಿ ರಾಕೇಶ್‌ ಅಗ್ರವಾಲ್‌ ಬುಧವಾರ ನೇಮಕಗೊಂಡಿದ್ದಾರೆ.  

ಹಿಮಾಚಲ ಪ್ರದೇಶ ಕೇಡರ್‌ನ 1994ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ಅಗ್ರವಾಲ್‌ ಇದುವರೆಗೆ ಭಯೋತ್ಪಾದನಾ ನಿಗ್ರಹ ದಳದ ವಿಶೇಷ ಮಹಾನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಎನ್‌ಐಎನ ಮಹಾನಿರ್ದೇಶಕ ಹುದ್ದೆಯ ಹೆಚ್ಚುವರಿ ಹೊಣೆಯನ್ನೂ ನಿಭಾಯಿಸುತ್ತಿದ್ದರು.  

ADVERTISEMENT

ನೇಮಕಾತಿಗಳಿಗೆ ಸಂಬಂಧಿಸಿದ ಸಂಪುಟ ಸಮಿತಿಯು ಅಗ್ರವಾಲ್‌ ನೇಮಕವನ್ನು ಅನುಮೋದಿಸಿದೆ. ಎನ್‌ಐಎ ಡಿಜಿ ಹುದ್ದೆಯ ಅವಧಿ 2028ರ ಆಗಸ್ಟ್‌ 31ರವರೆಗೆ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.