ADVERTISEMENT

ಚುನಾವಣೆಗೆ ಮೊದಲೇ ರಾಮ ಮಂದಿರಕ್ಕೆ ಪ್ರವೇಶ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 19:30 IST
Last Updated 4 ಆಗಸ್ಟ್ 2021, 19:30 IST
ರಾಮ ಮಂದಿರದ ಮಾದರಿ
ರಾಮ ಮಂದಿರದ ಮಾದರಿ   

ಲಖನೌ: ಅಯೋಧ್ಯೆಯಲ್ಲಿ ನಿರ್ಮಾಣ ಆಗುತ್ತಿರುವ ರಾಮ ಮಂದಿರಕ್ಕೆ 2023ರ ಡಿಸೆಂಬರ್‌ನಲ್ಲಿ ಭಕ್ತರ ಪ್ರವೇಶಕ್ಕೆ ಅವಕಾಶ ದೊರೆಯುವ ಸಾಧ್ಯತೆ ಇದೆ. ಅದಾಗಿ ಕೆಲವೇ ತಿಂಗಳಲ್ಲಿ ಅಂದರೆ, 2024ರ ಮೇಯ ಒಳಗೆ ಲೋಕಸಭೆಗೆ ಚುನಾವಣೆಯ ನಡೆಯಲಿದೆ.

2023ರ ಡಿಸೆಂಬರ್‌ನಲ್ಲಿ ದೇವಾಲಯದ ಗರ್ಭಗುಡಿ ನಿರ್ಮಾಣ ಪೂರ್ಣಗೊಳ್ಳಲಿದೆ. ಬಳಿಕ, ಭಕ್ತರಿಗೆ ಪ್ರವೇಶ ಕಲ್ಪಿಸಲಾಗುವುದು ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಹೇಳಿದೆ. ರಾಮ ಮಂದಿರ ನಿರ್ಮಾಣದ ಮೇಲ್ವಿಚಾರಣೆಯನ್ನು ಈ ಟ್ರಸ್ಟ್‌ ನೋಡಿಕೊಳ್ಳುತ್ತಿದೆ.

2023ರಲ್ಲಿ ಗರ್ಭಗುಡಿ ನಿರ್ಮಾಣವಾದರೂ ದೇವಾಲಯದ ಕಾಮಗಾರಿಯು 2025ರ ಕೊನೆಯ ಹೊತ್ತಿಗಷ್ಟೇ ಪೂರ್ಣಗೊಳ್ಳಬಹುದು. ಟ್ರಸ್ಟ್‌ನ ಸಭೆಯು ಕೆಲದಿನಗಳ ಹಿಂದೆ ನಡೆದಿದೆ. ಈ ಸಭೆಯಲ್ಲಿ 2023ರ ಗಡುವು ನಿಗದಿ ಮಾಡಲಾಗಿದೆ ಎಂದು ಟ್ರಸ್ಟ್‌ನ ಪದಾಧಿಕಾರಿಯೊಬ್ಬರು
ಹೇಳಿದ್ದಾರೆ.

ADVERTISEMENT

2024ರ ಲೋಕಸಭಾ ಚುನಾವಣೆಗೆ ಮುನ್ನವೇ ರಾಮ ಮಂದಿರ ನಿರ್ಮಾಣ ಆಗಬೇಕು ಎಂಬುದು ವಿಶ್ವ ಹಿಂದೂ ಪರಿಷತ್‌ ಮತ್ತು ಬಿಜೆಪಿಯ ಇಚ್ಛೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಕಳೆದ ಆಗಸ್ಟ್ 5ರಂದು ಶಂಕುಸ್ಥಾಪನೆ ನೆರವೇರಿಸಿದ್ದರು.

2024ರ ಲೋಕಸಭಾ ಚುನಾವಣೆಯಲ್ಲಿ ಮೂರನೇ ಅವಧಿಗೆ ಪುನರಾಯ್ಕೆಗೊಳ್ಳಲು ಮೋದಿ ನೇತೃತ್ವದ ಸರ್ಕಾರವು ಬಯಸುತ್ತಿದೆ. ಹಾಗಾಗಿ, ಚುನಾವಣೆಗೆ ಮುನ್ನವೇ ದೇವಾಲಯಕ್ಕೆ ಭಕ್ತರಿಗೆ ಪ‍್ರವೇಶ ನೀಡುವ ಯೋಜನೆಯು ಮಹತ್ವ ಪಡೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.