ನವದೆಹಲಿ: ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಉದ್ಘಾಟನಾ ಸಮಾರಂಭದ ನೇರ ಪ್ರಸಾರವನ್ನು ರಾಷ್ಟ್ರ ರಾಜಧಾನಿ ದೆಹಲಿಯಾದ್ಯಂತ ಸುಮಾರು 14,000 ದೇವಾಲಯಗಳಲ್ಲಿ ಏರ್ಪಡಿಸಲಾಗುವುದು ಎಂದು ದೆಹಲಿ ಬಿಜೆಪಿ ಘಟಕ ಅಧ್ಯಕ್ಷ ಕರ್ನೈಲ್ ಸಿಂಗ್ ತಿಳಿಸಿದ್ದಾರೆ.
ದೇವಾಲಯದ ಉದ್ಘಾಟನಾ ಸಮಾರಂಭವನ್ನು ನೇರ ಪ್ರಸಾರದಲ್ಲಿ ವೀಕ್ಷಿಸಲು ಪ್ರತಿ ದೇವಸ್ಥಾನದಲ್ಲಿ ಸುಮಾರು 200 ಜನರು ಹಾಜರಾಗುವ ಸಾಧ್ಯತೆಯಿದೆ. 30 ಲಕ್ಷ ಜನರು ನೇರಪ್ರಸಾರ ವೀಕ್ಷಿಸಲು ದೇವಸ್ಥಾನಗಳಿಗೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ
ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರ ಉದ್ಘಾಟನೆಯನ್ನು ಐತಿಹಾಸಿಕ ಘಟನೆಯನ್ನಾಗಿಸಲು, ಜನವರಿ 20ರಂದು ದೆಹಲಿಯ ಕರ್ನಲ್ ರಸ್ತೆಯಲ್ಲಿರುವ ಖಾತು ಶ್ಯಾಮ ದೇವಸ್ಥಾನದಲ್ಲಿ 1.08 ಲಕ್ಷ ದೀಪಗಳನ್ನು ಬೆಳಗಿಸಲಾಗುವುದು. ಅಲ್ಲದೆ, ಜನವರಿ 17ರಂದು ದೇವಾಲಯಗಳ ಅರ್ಚಕರು ಬೈಕ್ ರ‍್ಯಾಲಿಯನ್ನು ನಡೆಸಲಿದ್ದಾರೆ ಎಂದು ಸಿಂಗ್ ತಿಳಿಸಿದ್ದಾರೆ.
ದೆಹಲಿಯಾದ್ಯಂತ 14,000ಕ್ಕೂ ಹೆಚ್ಚು ದೇವಾಲಯಗಳ ಅರ್ಚಕರು ಜನರ ಮನೆ ಮನೆಗಳಿಗೆ ತೆರಳಿ ಅಕ್ಷತೆಯನ್ನು ನೀಡಲಿದ್ದಾರೆ. ಜನವರಿ 22ರಂದು ಹತ್ತಿರದ ದೇವಾಲಯಗಳಿಗೆ ಭೇಟಿ ನೀಡಿ ರಾಮ ಪ್ರಾಣ ಪ್ರತಿಷ್ಠಾಪನೆಯ ನೇರಪ್ರಸಾರವನ್ನು ವೀಕ್ಷಿಸಲು ಜನರನ್ನು ಆಹ್ವಾನಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.