ತಮಿಳುನಾಡಿನ ರಾಮೇಶ್ವರಂನಲ್ಲಿರುವ ಪಾಕ್ (Palk) ಜಲಸಂಧಿಯ ಮಂಡಪಂ ಹಾಗೂ ಪಂಬನ್ ರೈಲು ನಿಲ್ದಾಣಗಳ ನಡುವೆ ವಿಶಿಷ್ಟ ಲಿಫ್ಟ್ ಸಮುದ್ರ ಸೇತುವೆ ನಿರ್ಮಿಸಲಾಗಿದೆ.
ಸೇತುವೆಯ ಒಟ್ಟು ಉದ್ದ 2.2 ಕಿ.ಮೀ. ಇದೆ. ರೈಲು ಸಂಚಾರದ ವೇಳೆ ಸೇತುವೆಯಾಗುವ ಹಾಗೂ ಹಡಗು ಸಂಚಾರದ ಸಂದರ್ಭದಲ್ಲಿ ಲಂಬವಾಗಿ ಮೇಲಕ್ಕೇರಿ ದಾರಿ ಮಾಡುವ ಮೂಲಕ ಎರಡು ರೀತಿಯಲ್ಲಿ ಕಾರ್ಯ ನಿರ್ವಹಿಸುವ ಸೇತುವೆ ಇದಾಗಿದೆ. 17 ಮೀಟರ್ ಎತ್ತರಕ್ಕೆ ತೆರೆದುಕೊಳ್ಳುವಂತೆ ಇದನ್ನು ವಿನ್ಯಾಸ ಮಾಡಲಾಗಿದ್ದು ಇದನ್ನು ₹ 700 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.