ADVERTISEMENT

ಅಶ್ಲೀಲ ಹೇಳಿಕೆ: ಮಹಾರಾಷ್ಟ್ರ ಸೈಬರ್ ಸೆಲ್‌ ಮುಂದೆ ಹಾಜರಾದ ರಣವೀರ್ ಅಲಹಾಬಾದಿಯಾ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 11:28 IST
Last Updated 24 ಫೆಬ್ರುವರಿ 2025, 11:28 IST
<div class="paragraphs"><p>ರಣವೀರ್ ಅಲಹಾಬಾದಿಯಾ</p></div>

ರಣವೀರ್ ಅಲಹಾಬಾದಿಯಾ

   

(ಚಿತ್ರ ಕೃಪೆ: Instagram/@beerbiceps)

ಮುಂಬೈ: ‘ಇಂಡಿಯಾಸ್ ಗಾಟ್ ಲ್ಯಾಟೆಂಟ್‌’ ಕಾರ್ಯಕ್ರಮದಲ್ಲಿ ಅಶ್ಲೀಲ ಪದ ಬಳಕೆ ಮಾಡಿದ ಪ್ರಕರಣ ಸಂಬಂಧ ತಮ್ಮ ಹೇಳಿಕೆ ದಾಖಲಿಸಲು ಯೂಟ್ಯೂಬರ್‌ಗಳಾದ ರಣವೀರ್ ಅಲಹಾಬಾದಿಯಾ ಮತ್ತು ಆಶಿಶ್‌ ಚಂಚಲಾನಿ ಅವರು ಸೋಮವಾರ ಮಹಾರಾಷ್ಟ್ರ ಸೈಬರ್‌ ಸೆಲ್‌ ಮುಂದೆ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಮಹಾರಾಷ್ಟ್ರ ಸೈಬರ್ ಸೆಲ್‌ ನೀಡಿದ ಸಮನ್ಸ್‌ಗೆ ಪ್ರತಿಕ್ರಿಯಿಸಿರುವ ಅಲಹಾಬಾದಿಯಾ ಮತ್ತು ಚಂಚಲಾನಿ ಇಂದು ಮಧ್ಯಾಹ್ನ ನವಿ ಮುಂಬೈನ ಮಹಾಪೆಯಲ್ಲಿರುವ ಅದರ ಪ್ರಧಾನ ಕಚೇರಿಗೆ ತಲುಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇಬ್ಬರ ಹೇಳಿಕೆಯನ್ನು ಸೈಬರ್ ಪೊಲೀಸ್‌ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.

ಅಶ್ಲೀಲ ಹೇಳಿಕೆಗಳ ಕುರಿತು ಅಲಾಬಾದಿಯಾ ಮತ್ತು ಇತರರ ವಿರುದ್ಧ ದಾಖಲಾದ ಪ್ರಕರಣಗಳ ಬಗ್ಗೆ ಮಹಾರಾಷ್ಟ್ರ ಸೈಬರ್ ಸೆಲ್‌ ತನಿಖೆ ನಡೆಸುತ್ತಿದೆ.

‘ಇಂಡಿಯಾಸ್ ಗಾಟ್ ಲ್ಯಾಟೆಂಟ್‌’ ಕಾರ್ಯಕ್ರಮದ ಪ್ರದರ್ಶನ ವೇಳೆ ಪೋಷಕರು ಮತ್ತು ಲೈಂಗಿಕತೆ ಬಗ್ಗೆ ಅಲಹಬಾದಿಯಾ ಹೇಳಿಕೆ ನೀಡಿದ್ದು, ಭಾರಿ ಟೀಕೆಗೆ ಕಾರಣವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.