ADVERTISEMENT

ಲಾಲುಗೆ ನಿತೀಶ್‌ ಬೆಂಬಲ: ನಾಚಿಗೇಡು ಎಂದ ರವಿಶಂಕರ್‌ ಪ್ರಸಾದ್‌

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2022, 14:21 IST
Last Updated 9 ಅಕ್ಟೋಬರ್ 2022, 14:21 IST
ರವಿಶಂಕರ್‌ ಪ್ರಸಾದ್‌ 
ರವಿಶಂಕರ್‌ ಪ್ರಸಾದ್‌    

ನವದೆಹಲಿ (ಪಿಟಿಐ):ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ವಿರುದ್ಧ ಬಿಜೆಪಿ ನಾಯಕ ರವಿಶಂಕರ್‌ ಪ್ರಸಾದ್‌ ಅವರು ಭಾನುವಾರ ಕಿಡಿಕಾರಿದ್ದಾರೆ. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರ ವಿರುದ್ಧ ಸಿಬಿಐ ಚಾರ್ಜ್‌ಶೀಟ್‌ ಸಲ್ಲಿರುವುದನ್ನು ನಿತೀಶ್‌ ವಿರೋಧಿಸಿರುವುದು ನಾಚಿಗೇಡು ಮತ್ತು ದುರಾದೃಷ್ಟಕರ ಎಂದು ಅವರು ಹೇಳಿದ್ದಾರೆ.

ಇಲ್ಲಿ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡಿದ ರವಿಶಂಕರ್‌ ಪ್ರಸಾದ್‌, ‘ಲಾಲು ಪ್ರಸಾದ್‌ ಮತ್ತು ಅವರ ಕುಟುಂಬ ಸದಸ್ಯರನ್ನು ಸಮರ್ಥಿಸಿಕೊಳ್ಳುವ ಮೂಲಕ ನಿತೀಶ್‌ ಅವರು ತಮ್ಮ ಜೀವಮಾನದಲ್ಲಿ ಉಳಿಸಿಕೊಂಡಿದ್ದ ಘನತೆ ಜೊತೆ ರಾಜಿ ಮಾಡಿಕೊಂಡರು. ಭ್ರಷ್ಟಾಚಾರದ ವಿಚಾರದಲ್ಲಿ ಅವರು ಕುರುಡಾಗಿದ್ದನ್ನು ನೋಡಲು ಬೇಸರವಾಗುತ್ತದೆ’ ಎಂದರು.

‘ಭ್ರಷ್ಟಾಚಾರದ ಕಾರಣಕ್ಕಾಗಿಯೇ ನಿತೀಶ್‌ ಕುಮಾರ್‌ ಅವರು ಲಾಲು ಪ್ರಸಾದ್‌ ಅವರನ್ನು 2017ರಲ್ಲಿ ತೊರೆದಿದ್ದರು. ಈಗ ಈ ಹೇಳಿಕೆ ನೀಡಿರುವುದು ನಾಚಿಗೇಡು’ ಎಂದಿದ್ದಾರೆ.

ADVERTISEMENT

ಲಾಲು ಪ್ರಸಾದ್‌ ಅವರು ರೈಲ್ವೆ ಸಚಿವರಾಗಿದ್ದ ಅವಧಿಗೆ ಸಂಬಂಧಿಸಿದ ಮೊಕದ್ದಮೆಯೊಂದರಲ್ಲಿ ಲಾಲು ಮತ್ತು ಅವರು ಕುಟುಂಬ ಸದಸ್ಯರ ವಿರುದ್ಧ ಸಿಬಿಐ ಚಾರ್ಜ್‌ಶೀಟ್‌ ಸಲ್ಲಿಸಿದೆ. ಇದನ್ನು ವಿರೋಧಿಸಿದ್ದ ನಿತೀಶ್‌, ‘ನಾನು ಮೃತ್ರಿಕೂಟಕ್ಕೆ ಮರಳಿರುವ ಕಾರಣ ಹೊಸ ಆಟಗಳು ಶುರುವಾಗಿವೆ’ ಎಂದು ಶನಿವಾರ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.