ADVERTISEMENT

ಕೋವಿಡ್‌-19: ಗುಣಮುಖರ ಸಂಖ್ಯೆ 20 ಲಕ್ಷಕ್ಕೂ ಹೆಚ್ಚು

ಪಿಟಿಐ
Published 19 ಆಗಸ್ಟ್ 2020, 19:24 IST
Last Updated 19 ಆಗಸ್ಟ್ 2020, 19:24 IST
   
""

ನವದೆಹಲಿ: ಭಾರತದಲ್ಲಿ ಕೋವಿಡ್‌ನಿಂದ ಗುಣಮುಖರಾಗಿ ಮನೆಗೆ ತೆರಳಿದವರ ಸಂಖ್ಯೆ ಮಂಗಳವಾರ 20 ಲಕ್ಷ ದಾಟಿದೆ. ಮಂಗಳವಾರ ಒಂದೇ ದಿನ 60 ಸಾವಿರ ಮಂದಿ ಗುಣಮುಖರಾಗಿದ್ದಾರೆ. ಗುಣಮುಖ ಪ್ರಮಾಣ ಶೇ 73.64ಕ್ಕೆ ಏರಿಕೆಯಾಗಿದ್ದು, ಮರಣ ಪ್ರಮಾಣ ಶೇ 1.91ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ

* ಹೆಚ್ಚುತ್ತಿರುವ ಚೇತರಿಕೆ ಪ್ರಮಾಣ ಹಾಗೂ ಕ್ಷೀಣಿಸುತ್ತಿರುವ ಮರಣ ಪ್ರಮಾಣದಿಂದಾಗಿ ಕೋವಿಡ್ ವಿರುದ್ಧದ ದೇಶದ ಹೋರಾಟ ಗಮನಾರ್ಹ
* ಆರೈಕೆ ವಿಧಾನ, ತಪಾಸಣಾ ಸಂಖ್ಯೆ ಹೆಚ್ಚಳ, ಪ್ರಕರಣಗಳನ್ನು ಸಮಗ್ರವಾಗಿ ಪತ್ತೆಹಚ್ಚುವ ಮತ್ತು ಪರಿಣಾಮಕಾರಿ ಚಿಕಿತ್ಸೆ ನೀಡುವ ಕ್ರಮಗಳು ನೆರವಾಗಿವೆ
* ದೇಶದ ಡಿಸಿಎಚ್, ಡಿಸಿಎಚ್‌ಸಿ ಹಾಗೂ ಡಿಸಿಸಿಸಿಗಳಲ್ಲಿ ಒಟ್ಟು 15 ಲಕ್ಷ ಐಸೊಲೇಷನ್ ಬೆಡ್, 2 ಲಕ್ಷ ಆಮ್ಲಜನಕ ಸೌಕರ್ಯದ ಬೆಡ್ ಹಾಗೂ 53 ಸಾವಿರ ಐಸಿಯು ಬೆಡ್‌ ವ್ಯವಸ್ಥೆ ಇದೆ
* ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಸಾವು ಸಂಭವಿಸಿವೆ. 20 ಸಾವಿರಕ್ಕೂ ಹೆಚ್ಚು ಜನ ಕೋವಿಡ್‌ಗೆ ತುತ್ತಾಗಿದ್ದಾರೆ. ನಂತರದ ಸ್ಥಾನದಲ್ಲಿ ತಮಿಳುನಾಡು, ದೆಹಲಿ, ಕರ್ನಾಟಕ ಇವೆ

* ಸೋಂಕಿತರ ಏರಿಕೆಗೆ ಸರಿಸಮನಾಗಿ ಗುಣಮುಖ ಪ್ರಮಾಣವೂ ಏರಿಕೆ ಕಾಣುತ್ತಿದೆ
* ಮಾರ್ಚ್ ತಿಂಗಳಲ್ಲಿ ಎರಡಂಕಿ ಇದ್ದ ಗುಣಮುಖರ ಸಂಖ್ಯೆ ಏಪ್ರಿಲ್ ವೇಳೆಗೆ ಸುಮಾರು ಎರಡೂವರೆ ಸಾವಿರಕ್ಕೆ ತಲುಪಿತು
* ಮೇ ತಿಂಗಳಲ್ಲಿ ಸಾವಿರ ಲೆಕ್ಕದಲ್ಲಿದ್ದ ಗುಣಮುಖರ ಸಂಖ್ಯೆ ಜೂನ್‌ನಲ್ಲಿ 2 ಲಕ್ಷಕ್ಕೆ ಜಿಗಿಯಿತು
* ಜುಲೈನಿಂದ ಆಗಸ್ಟ್‌ ನಡುವಿನ ಒಂದು ತಿಂಗಳಲ್ಲಿ ಮೂರು ಪಟ್ಟು ಜನರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.