ADVERTISEMENT

ಸಮ್ಮತಿಯ ಸೆಕ್ಸ್‌ನ ವಯೋಮಿತಿ 18ರಿಂದ 16ಕ್ಕೆ ಇಳಿಸಲು ಕೇಂದ್ರಕ್ಕೆ ಹೈಕೋರ್ಟ್ ಮನವಿ

ಮಧ್ಯಪ್ರದೇಶ ಹೈಕೋರ್ಟ್‌ನ ಗ್ವಾಲಿಯರ್ ಪೀಠ ನಿರ್ದೇಶನ

ಪಿಟಿಐ
Published 1 ಜುಲೈ 2023, 7:13 IST
Last Updated 1 ಜುಲೈ 2023, 7:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗ್ವಾಲಿಯರ್: ಸಹಮತದ ಲೈಂಗಿಕ ಸಂಬಂಧಕ್ಕೆ ಹೆಣ್ಣಿನ ವಯಸ್ಸನ್ನು 18ರಿಂದ 16 ವರ್ಷಕ್ಕೆ ಇಳಿಸ
ಬೇಕೆಂದು ಮಧ್ಯಪ್ರದೇಶ ಹೈಕೋರ್ಟ್‌ನ ಗ್ವಾಲಿಯರ್ ಪೀಠವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ಬಾಲಕಿ ಮೇಲಿನ ಅತ್ಯಾಚಾರ, ಗರ್ಭಧರಿಸಿದ ಪ್ರಕರಣದಲ್ಲಿ ವ್ಯಕ್ತಿ ಯೊಬ್ಬರ ವಿರುದ್ಧ ದಾಖಲಾದ ಎಫ್‌ಐಆರ್ ಅನ್ನು ರದ್ದುಪಡಿಸಿ ಆದೇಶ ನೀಡಿದ ನ್ಯಾಯಮೂರ್ತಿ ದೀಪಕ್ ಕುಮಾರ್ ಅಗರ್‌ವಾಲ್ ನೇತೃತ್ವದ ನ್ಯಾಯಪೀಠವು, ಈ ಮೇಲಿನಂತೆ ಕೇಂದ್ರ ಸರ್ಕಾರವನ್ನು ಕೋರಿದೆ.

‘ಈಚೆಗೆ, ಸಾಮಾಜಿಕ ಮಾಧ್ಯಮ ಜಾಗೃತಿಯಿಂದಾಗಿ ಹೆಣ್ಣಾಗಲೀ ಗಂಡಾಗಲೀ 14ನೇ ವರ್ಷಕ್ಕೇ ಪ್ರೌಢಾವಸ್ಥೆಗೆ ತಲುಪುತ್ತಿದ್ದಾರೆ. ಚಿಕ್ಕವಯಸ್ಸಿನಲ್ಲೇ ಪ್ರೌಢಾವಸ್ಥೆ ತಲುಪುತ್ತಿರುವುದು ಪರಸ್ಪರ ಆಕರ್ಷಿತರಾಗಿ ಒಪ್ಪಿತ ದೈಹಿಕ ಸಂಬಂಧಕ್ಕೆ ಕಾರಣವಾಗುತ್ತಿದೆ. ಆದರೆ, ಸಹಮತದ ಲೈಂಗಿಕ ಸಂಬಂಧಕ್ಕೆ ಹೆಣ್ಣಿನ ವಯಸ್ಸು 18ಕ್ಕೆ ನಿಗದಿಪಡಿಸಿರುವುದರಿಂದ ಬಾಲಕರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ. 

ADVERTISEMENT

‘ಒಪ್ಪಿತ ದೈಹಿಕ ಸಂಬಂಧಕ್ಕೆ ಹೆಣ್ಣಿನ
ವಯಸ್ಸನ್ನು 18ರಿಂದ 16 ವರ್ಷಕ್ಕೆ ಇಳಿಸಲು ಚಿಂತನೆ ನಡೆಸಬೇಕು. ಕಾನೂನು ತಿದ್ದುಪಡಿಯ ಮೂಲಕ ಈ ಅನ್ಯಾಯ ಸರಿಪಡಿಸಬೇಕು’ ಎಂದು ಪೀಠ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.