ADVERTISEMENT

ಅಮರನಾಥ ಯಾತ್ರೆಗೆ ನೋಂದಣಿ ಆರಂಭ

ಪಿಟಿಐ
Published 11 ಏಪ್ರಿಲ್ 2022, 14:42 IST
Last Updated 11 ಏಪ್ರಿಲ್ 2022, 14:42 IST
ಜಮ್ಮುವಿನಲ್ಲಿ ಅಮರನಾಥ ಯಾತ್ರೆಗೆ ನೋಂದಾಯಿಸಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿರುವ ಭಕ್ತಾದಿಗಳು
ಜಮ್ಮುವಿನಲ್ಲಿ ಅಮರನಾಥ ಯಾತ್ರೆಗೆ ನೋಂದಾಯಿಸಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿರುವ ಭಕ್ತಾದಿಗಳು   

ಜಮ್ಮು(ಪಿಟಿಐ): ದಕ್ಷಿಣ ಕಾಶ್ಮೀರದಲ್ಲಿರುವ ಅಮರನಾಥ ದೇವಾಲಯದ ವಾರ್ಷಿಕ ಯಾತ್ರೆಗೆ ದೇಶದಾದ್ಯಂತ ಸೋಮವಾರದಿಂದ ನೋಂದಣಿ ಆರಂಭವಾಗಿದ್ದು, ನೂರಾರು ಭಕ್ತಾದಿಗಳಲ್ಲಿ ಉತ್ಸಾಹದಿಂದ ನೋಂದಾಯಿಸಿಕೊಂಡರು.

43 ದಿನಗಳ ಯಾತ್ರೆ ಜೂನ್‌ 30ರಿಂದ ಆರಂಭಗೊಳ್ಳಲಿದ್ದು, ಎರಡು ಮಾರ್ಗಗಳ ಮೂಲಕ ಯಾತ್ರೆ ನಡೆಯಲಿದೆ. ಈ ಬಾರಿ ಸರ್ಕಾರ ರೆಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್‌ (ಆರ್‌ಎಫ್‌ಐಡಿ) ಮೂಲಕ ಯಾತ್ರಿಕರ ಸುರಕ್ಷತೆ ಮತ್ತು ಅವರ ಮೇಲೆ ನಿಗಾ ವಹಿಸಲು ನಿರ್ಧರಿಸಿದೆ.

ಶ್ರೀ ಅಮರನಾಥ ದೇಗುಲ ಸಮಿತಿಯು (ಎಸ್‌ಎಎಸ್‌ಬಿ) ವಾರ್ಷಿಕ ಯಾತ್ರೆಗೆ ಅನುಕೂಲ ಕಲ್ಪಿಸಲು ದೇಶದಾದ್ಯಂತ ಇರುವ 566 ಶಾಖೆಗಳಲ್ಲಿಯೂ ಯಾತ್ರಿಕರ ನೋಂದಣಿ ಆರಂಭಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.