ADVERTISEMENT

ಏನು ಹೇಳುತ್ತದೆ ಸಿಆರ್‌ಪಿಸಿ ಸೆಕ್ಷನ್‌ 144

​ಪ್ರಜಾವಾಣಿ ವಾರ್ತೆ
Published 10 ಜನವರಿ 2020, 20:00 IST
Last Updated 10 ಜನವರಿ 2020, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಪರಾಧ ದಂಡ ಸಂಹಿತೆಯ (ಸಿಆರ್‌ಪಿಸಿ) 144ನೇ ಸೆಕ್ಷನ್‌ 1973ರಲ್ಲಿ ಜಾರಿಗೆ ಬಂತು. ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಜನರು ಒಂದೆಡೆ ಸೇರುವುದನ್ನು ನಿರ್ಬಂಧಿಸುವಆದೇಶ ಹೊರಡಿಸಲು ಮ್ಯಾಜಿಸ್ಟ್ರೇಟ್‌ಗೆ ಈ ಸೆಕ್ಷನ್‌ ಅಧಿಕಾರ ನೀಡುತ್ತದೆ. ಇದನ್ನು ಉಲ್ಲಂಘಿಸಿ ಜನರು ಒಂದೆಡೆ ಸೇರಿದರೆ ಅದನ್ನು ‘ಕಾನೂನುಬಾಹಿರ ಸಭೆ’ ಎಂದು ಪರಿಗಣಿಸಬಹುದು. ಜತೆಗೆ, ಅವರ ವಿರುದ್ಧ ದೊಂಬಿ ಪ್ರಕರಣವನ್ನೂ ದಾಖಲಿಸಬಹುದು.

* 144ನೇ ಸೆಕ್ಷನ್‌ ಅಡಿಯಲ್ಲಿ ಪ್ರತಿಬಂಧಕಾಜ್ಞೆ ಜಾರಿಯಲ್ಲಿರುವ ಪ್ರದೇಶದಲ್ಲಿ ಆಯುಧಗಳನ್ನು ಇರಿಸಿಕೊಳ್ಳುವುದು ಅಥವಾ ಸಾಗಿಸುವುದರ ಮೇಲೆಯೂ ನಿರ್ಬಂಧ ಹೇರಬಹುದು. ಈ ನಿರ್ಬಂಧವನ್ನು ಉಲ್ಲಂಘಿಸಿದವರನ್ನು ಬಂಧಿಸಬಹುದು. ಇದು 3 ವರ್ಷ ಶಿಕ್ಷೆ ವಿಧಿಸಬಹುದಾದ ಅಪರಾಧ

*ಜನರ ಸಂಚಾರವನ್ನು ನಿರ್ಬಂಧಿಸುವುದಕ್ಕೆ ಅವಕಾಶ ಇದೆ. ಶೈಕ್ಷಣಿಕ ಸಂಸ್ಥೆಗಳನ್ನು ಮುಚ್ಚಬೇಕು. ಸಾರ್ವಜನಿಕ ಸಭೆ ಅಥವಾ ರ‍್ಯಾಲಿ ನಡೆಸುವುದಕ್ಕೂ ಅವಕಾಶ ಇಲ್ಲ

ADVERTISEMENT

*ಪ್ರತಿಬಂಧಕಾಜ್ಞೆ ಜಾರಿಯಲ್ಲಿ ಇರುವ ಪ್ರದೇಶದಲ್ಲಿ ಕಾನೂನು ಜಾರಿ ಅಧಿಕಾರಿಗಳು ಜನರ ಗುಂಪು ಚದುರಿಸುವ ಕರ್ತವ್ಯ ನಿರ್ವಹಿಸುವಾಗ ಅಡ್ಡಿಪಡಿ
ಸುವುದು ಶಿಕ್ಷಾರ್ಹ ಅಪರಾಧ. ಅಗತ್ಯ ಇದ್ದರೆ, ಇಂಟರ್‌ನೆಟ್‌ ಸೇವೆಯನ್ನು ಸ್ಥಗಿತಗೊಳಿಸುವ ಅವಕಾಶವೂ 144ನೇ ಸೆಕ್ಷನ್‌ನಲ್ಲಿ ಇದೆ

*ಸಹಜ ಸ್ಥಿತಿಯನ್ನು ಹದಗೆಡಿಸಬಹುದಾದ ಘಟನೆಗಳು ನಡೆಯಬಹುದಾದ ಸ್ಥಳದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳುವುದು

ಅವಧಿ ಎಷ್ಟು?

144ನೇ ಸೆಕ್ಷನ್‌ ಅಡಿಯಲ್ಲಿನ ಪ್ರತಿಬಂಧಕಾಜ್ಞೆಯು 2 ತಿಂಗಳಿಗಿಂತ ಹೆಚ್ಚು ಕಾಲ ಇರುವಂತಿಲ್ಲ. ಆದರೆ, ರಾಜ್ಯ ಸರ್ಕಾರವು ವಿವೇಚನಕಾಧಿಕಾರ ಬಳಸಿ ಈ ಪ್ರತಿಬಂಧಕಾಜ್ಞೆಯನ್ನು ಆರು ತಿಂಗಳವರೆಗೆ ವಿಸ್ತರಿಸಬಹುದು. ಪ್ರದೇಶವು ಸಹಜ ಸ್ಥಿತಿಗೆ ಮರಳಿದ ಕೂಡಲೇಪ್ರತಿಬಂಧಕಾಜ್ಞೆ ಹಿಂದಕ್ಕೆ ಪಡೆಯಬೇಕು

ಸುಪ್ರೀಂ ಕೋರ್ಟ್‌ ಹೇಳಿದ್ದು

1. ಸಿಆರ್‌ಪಿಸಿಯ 144ನೇ ಸೆಕ್ಷನ್ ಅನ್ನು ಪರಿಹಾರಾತ್ಮಕ ಕ್ರಮವಾಗಿಯೂ ಜಾರಿಗೆ ತರಬಹುದು. ಪ್ರತಿಬಂಧಕಾಜ್ಞೆಯಾಗಿಯೂ ಜಾರಿಗೆ ತರಬಹುದು. ಅಪಾಯದ ಪರಿಸ್ಥಿತಿಯಲ್ಲಿ ಮಾತ್ರವಲ್ಲ, ಅಪಾಯದ ಮುನ್ಸೂಚನೆ ಇದ್ದರೂ ಇದನ್ನು ಜಾರಿಗೆ ತರಬಹುದು. ಆದರೆ ಅಪಾಯವು ‘ತುರ್ತುಸ್ಥಿತಿ’ಯಷ್ಟು ದೊಡ್ಡದಾಗಿರಬೇಕು. ಯಾವುದೇ ವ್ಯಕ್ತಿಗೆ ಗಾಯಗಳಾಗುವ ಸಾಧ್ಯತೆ ಇದ್ದರೆ ಜಾರಿಗೆ ತರಬಹುದು. ಕಾನೂನು ಜಾರಿಗೆ ಇರುವ ಅಡಚಣೆಯನ್ನು ತಡೆಯಲೂ ಜಾರಿಗೆ ತರಬಹುದು

2. ಕಾನೂನುಬದ್ಧವಾಗಿ ಅಭಿಪ್ರಾಯ ವ್ಯಕ್ತಪಡಿಸುವುದನ್ನು, ಕೊಂದುಕೊರತೆ ಹೇಳಿಕೊಳ್ಳುವುದನ್ನು ಮತ್ತು ಪ್ರಜಾಸತ್ತಾತ್ಮಕವಾದ ಯಾವುದೇ ಹಕ್ಕಿನ ಚಲಾವಣೆಯನ್ನು ತಡೆಯಲು 144ನೇ ಸೆಕ್ಷನ್‌ ಅನ್ನು ಹೇರಬಾರದು

3. ಸಾಕ್ಷ್ಯಗಳ ಆಧಾರದಲ್ಲಿ ಈ ಸೆಕ್ಷನ್‌ ಅನ್ನು ಜಾರಿಗೆ ತರಬಹುದು. ಆದರೆ ಸಾಕ್ಷ್ಯಗಳ ವಿವರವನ್ನು ಆದೇಶದ ಪ್ರತಿಯಲ್ಲಿ ಕಡ್ಡಾಯವಾಗಿ ವಿವಿರಿಸಿರಬೇಕು. ಈ ಸೆಕ್ಷನ್‌ ಹೇರಿಕಿಗೆ ನೀಡಲಾಗಿರುವ ಕಾರಣವು, ಸಕಾರಣವಾಗಿರಬೇಕು. ಈ ಎಲ್ಲಾ ಅಂಶಗಳನ್ನು ನ್ಯಾಯಾಂಗದ ಪರಿಶೀಲನೆಗೆ ಒಡ್ಡಬಹುದು

4. ಈ ಸೆಕ್ಷನ್‌ ಅನ್ನು ಜಾರಿಗೆ ತರುವಾಗ ಹಕ್ಕುಗಳು ಮತ್ತು ನಿರ್ಬಂಧಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಮ್ಯಾಜಿಸ್ಟ್ರೇಟ್‌ನ ಜವಾಬ್ದಾರಿ

5. ಈ ಸೆಕ್ಷನ್‌ ಅನ್ನು ಪದೇಪದೇ ಹೇರುವುದು ಅಧಿಕಾರದ ದುರುಪಯೋಗ ಎನಿಸಿಕೊಳ್ಳುತ್ತದೆ

(‘ನ್ಯಾಯಾಲಯದ ಅಭಿಪ್ರಾಯದ ಆಧಾರದಲ್ಲಿ ಈ ಸೆಕ್ಷನ್ ಜಾರಿಗೆ ತರಲು ಸಾಧ್ಯವಿಲ್ಲ’ ಎಂದು ಜಮ್ಮು–ಕಾಶ್ಮೀರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪೀಠದ ಎದುರು ವಾದಿಸಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.