ADVERTISEMENT

ರೈಲಿಗೆ ತಲೆಕೊಟ್ಟು ನಿವೃತ್ತ ನ್ಯಾಯಾಧೀಶ ಮತ್ತವರ ಪತ್ನಿ ಆತ್ಮಹತ್ಯೆ

ಏಜೆನ್ಸೀಸ್
Published 6 ಅಕ್ಟೋಬರ್ 2018, 13:07 IST
Last Updated 6 ಅಕ್ಟೋಬರ್ 2018, 13:07 IST
   

ತಿರುಪತಿ:ಆಂಧ್ರ ಪ್ರದೇಶದ ಜಿಲ್ಲಾ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಮತ್ತು ಅವರ ಪತ್ನಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತಿರುಪತಿಯಲ್ಲಿ ವಾಸವಿದ್ದ ನಿವೃತ್ತ ನ್ಯಾಯಾಧೀಶ ಪಿ.ಸುಧಾಕರ್‌(65) ಅವರ ಮೃತ ದೇಹ ತಿರುಪತಿ–ರೇಣಿಗುಂಟಾ ಮಾರ್ಗದ ರೈಲ್ವೆ ಹಳಿಯಲ್ಲಿಪತ್ತೆಯಾಗಿದೆ. ಕಾಡುತ್ತಿದ್ದ ಅನಾರೋಗ್ಯ ಸಮಸ್ಯೆಯಿಂದಾಗಿ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಪತಿಯ ಸಾವಿನ ಸುದ್ದಿ ತಿಳಿದ ಕೆಲವೇ ಸಮಯದಲ್ಲಿ ಸುಧಾಕರ್‌ ಅವರ ಪತ್ನಿ ಪಿ.ವಿಜಯಲಕ್ಷ್ಮಿ(56), ಅದೇ ಸ್ಥಳದಲ್ಲಿ ಮತ್ತೊಂದು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ADVERTISEMENT

ತಿರುಪತಿಯಲ್ಲಿ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶರಾಗಿದ್ದ ಪಿ.ಸುಧಾಕರ್‌ ಅವರಿಗೆ ನಂತರದಲ್ಲಿ ಬಡ್ತಿ ದೊರೆತು ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾಗಿ ವರ್ಗಾವಣೆಗೊಂಡಿದ್ದರು. ನಿವೃತ್ತಿಯ ಬಳಿಕ ತಿರುಪತಿಯ ತಿರುಚನೂರಿನಲ್ಲಿ ವಾಸಿಸುತ್ತಿದ್ದರು. ಮೃತ ದಂಪತಿಗೆ ಸಾಫ್ಟ್‌ವೇರ್‌ ಎಂಜಿನಿಯರ್‌ ಉದ್ಯೋಗಿಯಾಗಿರುವ ಮಗ ಹಾಗೂ ಮಗಳು ಇದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ರೈಲ್ವೆ ಪೊಲೀಸರು ಮೃತ ದೇಹಗಳನ್ನು ಶವ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.