ADVERTISEMENT

‘ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ’: ಕೋವಿನ್ ವೇದಿಕೆಗೆ ಸೆಪ್ಟೆಂಬರ್‌ನಲ್ಲಿ ಚಾಲನೆ

ಪಿಟಿಐ
Published 18 ಆಗಸ್ಟ್ 2022, 11:48 IST
Last Updated 18 ಆಗಸ್ಟ್ 2022, 11:48 IST
ಕೋವಿನ್
ಕೋವಿನ್   

ನವದೆಹಲಿ: ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದ (ಯುಐಪಿ) ಸೌಲಭ್ಯವನ್ನು ಅಳವಡಿಸಿರುವ, ಪರಿಷ್ಕೃತ ‘ಕೋವಿನ್’ ವೇದಿಕೆಗೆ ಸೆಪ್ಟೆಂಬರ್‌ನಲ್ಲಿ ಚಾಲನೆ ನೀಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪರಿಷ್ಕೃತ ‘ಕೋವಿನ್‌ ವೇದಿಕೆ’ಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿದೆ. ರಕ್ತ ದಾನ, ಅಂಗಾಂಗ ದಾನಕ್ಕೆ ಸಂಬಂಧಿಸಿದ ಮಾಹಿತಿ, ನೋಂದಣಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಹಂತಹಂತವಾಗಿ ಈ ವೇದಿಕೆಗೆ ಅಳವಡಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

‘ಈ ಪ್ರಾಯೋಗಿಕ ಯೋಜನೆಯನ್ನು ಪ್ರತಿಯೊಂದು ರಾಜ್ಯ/ಕೇಂದ್ರಾಡಳಿತ ಪ್ರದೇಶದ ಎರಡು ಜಿಲ್ಲೆಗಳಲ್ಲಿ ಮೂರು ತಿಂಗಳ ಅವಧಿಗೆ ಜಾರಿಗೊಳಿಸಲಾಗುತ್ತದೆ. ಕೋವಿಡ್‌–19 ಲಸಿಕೆ ಹಾಕಿಸಿಕೊಳ್ಳುವುದು ಹಾಗೂ ಪ್ರಮಾಣಪತ್ರ ಪಡೆಯುವ ಸೇವೆಗಳು ‘ಕೋವಿನ್‌’ನಲ್ಲಿ ಮುಂದುವರಿಯಲಿವೆ’ ಎಂದೂ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

‘ಯುಐಪಿಯನ್ನು ಕೋವಿನ್‌ಗೆ ಅಳವಡಿಸಿದ ನಂತರ, ಲಸಿಕೆ ನೀಡುವ ಇಡೀ ವ್ಯವಸ್ಥೆಗೆ ಡಿಜಿಟಲ್ ಸ್ಪರ್ಶ ಸಿಕ್ಕಂತಾಗುವುದು. ಫಲಾನುಭವಿಗಳನ್ನು ಪತ್ತೆ ಹಚ್ಚುವ ಕಾರ್ಯ ಮತ್ತಷ್ಟೂ ಸುಲಭವಾಗುವುದು’ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಯುಐಪಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕೋವಿನ್‌ಗೆ ಅಳವಡಿಸುವ ಕಾರ್ಯಕ್ಕೆ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು (ಎನ್‌ಎಚ್‌ಎ) ಚುರುಕು ನೀಡಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.