ADVERTISEMENT

ಇಂಟರ್‌ನೆಟ್‌ ಮೂಲಭೂತ ಹಕ್ಕಲ್ಲ: ಕೇಂದ್ರ ಸರ್ಕಾರ 

ಪಿಟಿಐ
Published 6 ಫೆಬ್ರುವರಿ 2020, 14:00 IST
Last Updated 6 ಫೆಬ್ರುವರಿ 2020, 14:00 IST
   

ನವದೆಹಲಿ: ಇಂಟರ್‌ನೆಟ್‌ ಹಕ್ಕನ್ನು ಮೂಲಭೂತ ಹಕ್ಕು ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ. ಇಂಟರ್‌ನೆಟ್‌ ಜೊತೆಗೆ ರಾಷ್ಟ್ರದ ಭದ್ರತೆಯೂ ಅಷ್ಟೇ ಮುಖ್ಯ ಎಂದು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್ ಪ್ರತಿಪಾದಿಸಿದ್ದಾರೆ.‌

ರಾಜ್ಯಸಭೆಯಲ್ಲಿ ಗುರುವಾರ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಇಂಟರ್‌ನೆಟ್‌ನ ಸಂವಹನ ಸಿದ್ಧಾಂತ ಮತ್ತು ನಿರೂಪಣೆಯು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆಯೇ ಹೊರತು ಅದು ಮೂಲಭೂತ ಹಕ್ಕು ಎಂದು ಹೇಳಿಲ್ಲ’ ಎಂದು ವಿವರಿಸಿದರು.

‘ಐಎಸ್‌ ಎಲ್ಲೆಡೆ ವ್ಯಾಪಿಸಲು ಇಂಟರ್‌ನೆಟ್‌ ಕಾರಣ.ಪಾಕಿಸ್ತಾನವು ಕಾಶ್ಮೀರದಲ್ಲಿ ಇಂಟರ್‌ನೆಟ್‌ ಮೂಲಕ ಹಿಂಸೆ ಮತ್ತು ಭಯೋತ್ಪಾದನೆಯನ್ನು ಹರಡಿದೆ. ಕಾಶ್ಮೀರದಲ್ಲಿ ಭಯೋತ್ಪಾದನೆ ಬೆಳೆಯಲು ಅನುಕೂಲ ಮಾಡಿಕೊಡಬೇಕೇ’ ಎಂದೂ ಪ್ರಶ್ನಿಸಿದರು.‌

ADVERTISEMENT

ಇದೀಗ ಕಾಶ್ಮೀರದಲ್ಲಿ ದೂರವಾಣಿ ಮತ್ತು ಇಂಟರ್‌ನೆಟ್‌ ಸೌಲಭ್ಯ ಮುಂದುವರಿಸಲಾಗಿದ್ದು, ಬಿಳಿಪಟ್ಟಿಯಲ್ಲಿರುವ (ವೈಟ್‌ ಲಿಸ್ಟ್) 783 ವೆಬ್‌ಸೈಟ್‌ಗಳನ್ನು ಗ್ರಾಹಕರ ಬಳಕೆಗೆ ಮುಕ್ತಗೊಳಿಸಲಾಗಿದೆ.ಇ–ಮಂಡಿ ಮೂಲಕ ನಿತ್ಯ 450 ಲಾರಿಗಳಷ್ಟು ಸೇಬು ಹಣ್ಣುಗಳ ವಹಿವಾಟು ನಡೆಯುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.