ADVERTISEMENT

ಆಹಾರ ಪದಾರ್ಥಗಳ ಮಾರಾಟಕ್ಕೆ ರೈಲ್ವೆ ಅನುಮತಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 15:55 IST
Last Updated 4 ಅಕ್ಟೋಬರ್ 2020, 15:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರೈಲು ನಿಲ್ದಾಣದ ಆವರಣ ಮತ್ತು ಪ್ಲಾಟ್‌ಫಾರಂಗಳಲ್ಲಿರುವ ತನ್ನ ಮಾರಾಟ ಮಳಿಗೆಗಳಲ್ಲಿ ಬೇಯಿಸಿದ ಆಹಾರ ಪದಾರ್ಥಗಳ ಮಾರಾಟಕ್ಕೆ ಭಾರತೀಯ ರೈಲ್ವೆ ಅನುಮತಿ ನೀಡಿದೆ.

ಕೋವಿಡ್–19ರಿಂದಾಗಿ ನಿಲ್ದಾಣದಲ್ಲಿರುವ ಆಹಾರ ಮಳಿಗೆಗಳು, ಫಾಸ್ಟ್‌ಫುಡ್‌ ಕೇಂದ್ರ, ‘ಜನ್‌ ಆಹಾರ್’‌ ಮಳಿಗೆಗಳಲ್ಲಿ ಪ್ಯಾಕ್‌ ಮಾಡಲಾದ ಸೀಮಿತ ಪದಾರ್ಥಗಳ ಮಾರಾಟಕ್ಕೆ ಅವಕಾಶವಿತ್ತು. ಈಗ, ಪರವಾನಗಿ ಶುಲ್ಕದ ಶೇ 20ರಷ್ಟನ್ನು ಪಡೆದು ಬೇಯಿಸಿದ ಸಿದ್ಧ ಆಹಾರ ಮಾರಲು ಅ.31ರವರೆಗೂ ಅವಕಾಶ ನೀಡಬಹುದು ಐಆರ್‌ಸಿಟಿಸಿ ವಿವಿಧ ರೈಲ್ವೆ ವಲಯಗಳಿಗೆ ಸೂಚನೆ ನೀಡಿದೆ.

ಯಾವುದೇ ಕಾರಣಕ್ಕೂ ನಿಲ್ದಾಣದ ಆವರಣ, ಫ್ಲಾಟ್‌ಫಾರಂ ಮಳಿಗೆಗಳು, ಹೋಟೆಲ್‌ಗಳಲ್ಲಿ ಆಹಾರ ಸೇವಿಸಲು ಅವಕಾಶ ಕಲ್ಪಿಸಬಾರದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ADVERTISEMENT

ಹಬ್ಬಗಳ ಋತು ಆರಂಭವಾಗುವ ಕಾರಣದಿಂದ ಈ ಆದೇಶವು ಪ್ರಯಾಣಿಕರಿಗೆ ನೆರವಾಗಲಿದೆ. ಈ ಮಧ್ಯೆ, ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಕಾರಣ ಅ.15ರಿಂದ ನ. 30ರವರೆಗೆ ಹೆಚ್ಚುವರಿಯಾಗಿ 200 ವಿಶೇಷ ರೈಲುಗಳ ಸಂಚಾರ ಆರಂಭಿಸಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.