ADVERTISEMENT

ರಾಬರ್ಟ್‌ ವಾದ್ರಾ ನಿರಾಳ

ಪಿಟಿಐ
Published 2 ಮಾರ್ಚ್ 2019, 18:39 IST
Last Updated 2 ಮಾರ್ಚ್ 2019, 18:39 IST
ರಾಬರ್ಟ್‌ ವಾದ್ರಾ
ರಾಬರ್ಟ್‌ ವಾದ್ರಾ   

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಬರ್ಟ್‌ ವಾದ್ರಾ ಅವರನ್ನು ಬಂಧಿಸದಂತೆ ನೀಡಿದ್ದ ಮಧ್ಯಂತರ ತಡೆಯನ್ನು ಮಾರ್ಚ್‌ 19ರವರೆಗೆ ದೆಹಲಿಯ ನ್ಯಾಯಾಲಯವು ವಿಸ್ತರಿಸಿದೆ. ಆದರೆ, ವಿಚಾರಣೆಗೆ ವಾದ್ರಾ ಸಹಕರಿಸುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ದೂರಿದೆ.

ಮಧ್ಯಂತರ ತಡೆ ವಿಸ್ತರಿಸಿದ ವಿಶೇಷ ನ್ಯಾಯಾಧೀಶ ಅರವಿಂದಕುಮಾರ್‌, ವಿಚಾರಣೆಗೆ ಸಹಕರಿಸಬೇಕು ಎಂದು ವಾದ್ರಾಗೆ ಸೂಚಿಸಿದರು. ವಾದ್ರಾ ಆಪ್ತ, ಸಹ ಆರೋಪಿ ಮನೋಜ್‌ ಅರೋರಾ ಅವರ ಬಂಧನಕ್ಕೆ ನೀಡಿದ್ದ ತಡೆಯನ್ನೂ ಮಾರ್ಚ್‌ 19ರವರೆಗೆ ವಿಸ್ತರಿಸಿದರು.

ವಾದ್ರಾ ವಿರುದ್ಧ ಪ್ರಕರಣ ದಾಖಲಿಸಿರುವ ಇ.ಡಿ, ‘ವಾದ್ರಾರನ್ನು ಇನ್ನೂ 15ರಿಂದ 16 ದಿನಗಳವರೆಗೆ ವಿಚಾರಣೆ ನಡೆಸುವ ಅವಶ್ಯಕತೆ ಇದೆ’ ಎಂದು ನ್ಯಾಯಾಲಯಕ್ಕೆ ಹೇಳಿತು.

ADVERTISEMENT

ಈ ಆರೋಪವನ್ನು ನಿರಾಕರಿಸಿದ ವಾದ್ರಾ ಪರ ವಕೀಲರಾದ ಕೆಟಿಎಸ್‌ ತುಳಸಿ, ’ವಾದ್ರಾ ವಿಚಾರಣೆಗೆ ಹಾಜರಾಗಿದ್ದಾರೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ‘ ಎಂದರು.

ಲಂಡನ್‌ನಲ್ಲಿ 19 ಮಿಲಿಯನ್‌ ಪೌಂಡ್‌ (₹17.44 ಕೋಟಿ) ಮೊತ್ತದ ಆಸ್ತಿ ಖರೀದಿಗೆ ಸಂಬಂಧಿಸಿದಂತೆ ಅಕ್ರಮ ನಡೆದಿರುವ ಪ್ರಕರಣದಲ್ಲಿ ವಾದ್ರಾ ಆರೋಪಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.