ADVERTISEMENT

ವಿದೇಶ ಪ್ರವಾಸಕ್ಕೆ ಅನುಮತಿ ಕೋರಿ ರಾಬರ್ಟ್‌ ವಾದ್ರಾಅರ್ಜಿ

ಪಿಟಿಐ
Published 7 ಡಿಸೆಂಬರ್ 2019, 18:30 IST
Last Updated 7 ಡಿಸೆಂಬರ್ 2019, 18:30 IST
ರಾಬರ್ಟ್‌ ವಾದ್ರಾ
ರಾಬರ್ಟ್‌ ವಾದ್ರಾ   

ನವದೆಹಲಿ: ಉದ್ಯಮಿ ರಾಬರ್ಟ್‌ ವಾದ್ರಾ, ತಮ್ಮ ವೈದ್ಯಕೀಯ ಚಿಕಿತ್ಸೆ ಮತ್ತು ವ್ಯಾಪಾರ ಉದ್ದೇಶಗಳಿಗಾಗಿ ವಿದೇಶ ಪ್ರವಾಸಕ್ಕೆ ಅನುಮತಿ ನೀಡಬೇಕೆಂದು ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಹಿರಿಯ ವಕೀಲೆ ಕೆ.ಟಿ.ಎಸ್‌.ತುಳಸಿ ಅವರು ಡಿ.9ರಿಂದ ಎರಡು ವಾರಗಳ ಕಾಲ ವಾದ್ರಾ ಅವರ ಸ್ಪೇನ್‌ ಪ್ರವಾಸಕ್ಕೆ ಅನುಮತಿ ನೀಡುವಂತೆ ನ್ಯಾಯಾಧೀಶ ಅರವಿಂದ್‌ ಕುಮಾರ್ ಅವರನ್ನು ಕೋರಿದ್ದಾರೆ. ಕೋರ್ಟ್‌ ಸೋಮವಾರದ ಒಳಗೆ ಈ ಬಗ್ಗೆ ವಿವರಣೆ ನೀಡುವಂತೆಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದೆ.‌

ಕಳೆದ ಜೂನ್‌ನಲ್ಲೂ ಅಮೆರಿಕ ಮತ್ತು ನೆದರ್ಲೆಂಡ್‌ಪ್ರವಾಸಕ್ಕೆ ಅನುಮತಿ ಕೋರಿ ವಾದ್ರಾ ಅರ್ಜಿ ಸಲ್ಲಿಸಿದ್ದರು. ಸಾಕ್ಷ್ಯ ನಾಶದ ಆತಂಕವನ್ನು ಜಾರಿ ನಿರ್ದೇಶನಾಲಯ (ಇ.ಡಿ) ವ್ಯಕ್ತಪಡಿಸಿತ್ತು. ಹೀಗಾಗಿ ಕೋರ್ಟ್ ಅನುಮತಿ ನೀಡಿರಲಿಲ್ಲ.ಲಂಡನ್‌ನಲ್ಲಿ ಆಸ್ತಿ ಖರೀದಿಸುವುದಕ್ಕಾಗಿ ಹಣ ಅಕ್ರಮ ವರ್ಗಾವಣೆ ಮಾಡಿರುವಆರೋಪ ವಾದ್ರಾ ಅವರ ಮೇಲಿದ್ದು ಇ.ಡಿ ಪ್ರಕರಣ ದಾಖಲಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.