ADVERTISEMENT

ರೂಮ್ ಹೀಟರ್‌ನಿಂದ ಬೆಂಕಿ ಅವಘಡ: ತಂದೆ, 3 ತಿಂಗಳ ಮಗಳು ಸಜೀವ ದಹನ

ಪಿಟಿಐ
Published 23 ಡಿಸೆಂಬರ್ 2023, 9:50 IST
Last Updated 23 ಡಿಸೆಂಬರ್ 2023, 9:50 IST
   

ಜೈಪುರ: ಕೋಣೆಯಲ್ಲಿ ಅಳವಡಿಸಿದ್ದ ಹೀಟರ್‌ನಿಂದಾಗಿ ಬೆಂಕಿ ಅವಘಡ ಸಂಭವಿಸಿದ್ದು, ಈ ವೇಳೆ ತಂದೆ ಹಾಗೂ 3 ತಿಂಗಳ ಮಗು ಸಜೀವ ದಹನಗೊಂಡಿರುವ ಘಟನೆ ರಾಜಸ್ಥಾನದ ಖೈರ್ತಾಲ್-ತಿಜಾರಾ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ.

ಬೆಂಕಿ ಅವಘಡದಲ್ಲಿ ದೀಪಕ್‌ ಯಾದವ್‌ ಹಾಗೂ ಅವರ ಮೂರು ತಿಂಗಳ ಮಗಳು ನಿಶಿಕಾ ಸಜೀವ ದಹನಗೊಂಡಿದ್ದು, ಯಾದವ್‌ ಪತ್ನಿ ಸಂಜು ಅವರಿಗೆ ಸುಟ್ಟ ಗಾಯಗಳಾಗಿವೆ.

ADVERTISEMENT

ಸಂತ್ರಸ್ತರ ಕೂಗಾಟ ಕೇಳಿ ಅಕ್ಕಪಕ್ಕದ ಮನೆಯವರು ಧಾವಿಸಿ ಬೆಂಕಿ ನಂದಿಸಿದ್ದಾರೆ. ಸಂಜು ಅವರನ್ನೂ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕೆಯ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದೀಪಕ್‌ ಯಾದವ್‌ ಚಾಲಕರಾಗಿ ಕೆಲಸ ಮಾಡುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.