ADVERTISEMENT

ವಿವಾದ | ಮಲಯಾಳ ನಟ ಮಮ್ಮುಟ್ಟಿಗಾಗಿ ವಿಶೇಷ ಪೂಜೆ ಮಾಡಿಸಿದ ಮೋಹನ್‌ಲಾಲ್

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2025, 14:36 IST
Last Updated 25 ಮಾರ್ಚ್ 2025, 14:36 IST
ಮೋಹನ್‌ಲಾಲ್
ಮೋಹನ್‌ಲಾಲ್   

ತಿರುವನಂತಪುರ: ಮಲಯಾಳ ನಟ ಮೋಹನ್‌ಲಾಲ್ ಅವರು ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ನಟ ಮಮ್ಮುಟ್ಟಿ ಅವರಿಗಾಗಿ ವಿಶೇಷ ಪೂಜೆ ಮಾಡಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಮೋಹನ್ ಲಾಲ್ ಅವರು ಮಾ.18ರಂದು ಮಮ್ಮುಟ್ಟಿ ಅವರ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಿದ್ದರು. ದೇಗುಲವು ನೀಡಿದ್ದ ರಸೀದಿಯಲ್ಲಿ ಮಮ್ಮುಟ್ಟಿ ಅವರ ಹೆಸರನ್ನು ಮಹಮ್ಮದ್‌ ಕುಟ್ಟಿ ಎಂದು ನಮೂದಿಸಲಾಗಿತ್ತು. ಈ ರಸೀದಿಯು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು. ಇದರ ಬೆನ್ನಲ್ಲೇ ಕೆಲವರು ಮಮ್ಮುಟ್ಟಿ ಅವರು ಇಸ್ಲಾಂ ಸಮುದಾಯಕ್ಕೆ ಸೇರಿದವರು. ಅವರ ಹೆಸರಿನಲ್ಲಿ ಹಿಂದೂ ದೇಗುಲದಲ್ಲಿ ಪೂಜೆ ಮಾಡಿಸಲಾಗಿದೆ ಎಂದು ತಕರಾರು ಎತ್ತಿದ್ದಾರೆ.

ಮೋಹನ್‌ಲಾಲ್‌ ಅಸಮಾಧಾನ: ವಿಶೇಷ ಪೂಜೆ ಕುರಿತ ರಸೀದಿಯನ್ನು ದೇಗುಲದ ಕೆಲವು ಅಧಿಕಾರಿಗಳೇ ಬಹಿರಂಗಪಡಿಸಿದ್ದಾರೆ ಎಂದು ಮೋಹನ್‌ಲಾಲ್‌ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ತಿರುವಾಂಕೂರು ದೇವಸ್ವ ಮಂಡಳಿಯು, ‘ನಮ್ಮ ಕಡೆಯಿಂದ ರಸೀದಿಯು ಬಹಿರಂಗಗೊಂಡಿಲ್ಲ’ ಎಂದು ಸ್ಪಷ್ಟನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.