ADVERTISEMENT

ರಷ್ಯಾ | ಬೇಹುಗಾರಿಕೆ ಆರೋಪ: ಇಬ್ಬರು ಬ್ರಿಟನ್‌ ರಾಜತಾಂತ್ರಿಕರ ಉಚ್ಚಾಟನೆ

ಏಜೆನ್ಸೀಸ್
Published 10 ಮಾರ್ಚ್ 2025, 15:17 IST
Last Updated 10 ಮಾರ್ಚ್ 2025, 15:17 IST
ರಷ್ಯಾ ರಾಷ್ಟ್ರಧ್ವಜ 
ರಷ್ಯಾ ರಾಷ್ಟ್ರಧ್ವಜ    

ಮಾಸ್ಕೊ: ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಇಲ್ಲಿನ ಬ್ರಿಟನ್‌ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳನ್ನು ರಷ್ಯಾ ಸೋಮವಾರ ಉಚ್ಚಾಟಿಸಿದೆ.  

‘ಉಚ್ಚಾಟನೆಗೊಂಡ ಇಬ್ಬರೂ ರಷ್ಯಾ ಪ್ರವೇಶಿಸುವ ಸಂದರ್ಭದಲ್ಲಿ ನಕಲಿ ದಾಖಲೆಗಳನ್ನು ನೀಡಿದ್ದಾರೆ. ಅಲ್ಲದೆ, ದೇಶದ ಭದ್ರತೆಗೆ ಅಪಾಯವನ್ನುಂಟು ಮಾಡುವ ಬೇಹುಗಾರಿಕೆ ಹಾಗೂ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ’ ಎಂದು ರಷ್ಯಾದ ‘ಫೆಡರಲ್‌ ಸೆಕ್ಯುರಿಟಿ ಸರ್ವಿಸ್‌’ ಹೇಳಿರುವುದಾಗಿ ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದರೆ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳನ್ನು ರಷ್ಯಾ ನೀಡಿಲ್ಲ. 

ಬ್ರಿಟನ್‌ನ ರಾಯಭಾರ ಕಚೇರಿಗೆ ನೋಟಿಸ್‌ ನೀಡಿರುವ ರಷ್ಯಾ ವಿದೇಶಾಂಗ ಸಚಿವಾಲಯ ‘ರಾಜತಾಂತ್ರಿಕರಿಗೆ ನೀಡಿದ್ದ ಮಾನ್ಯತೆಗಳನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಲಾಗಿದೆ. 2 ವಾರಗಳ ಒಳಗಾಗಿ ಅವರು ರಷ್ಯಾದಿಂದ ತೆರಳಬೇಕು’ ಎಂದು ಹೇಳಿದೆ. ಈ ಬಗ್ಗೆ ಬ್ರಿಟನ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.