ADVERTISEMENT

ಉಕ್ರೇನ್‌ ಮೇಲೆ ಬರೋಬ್ಬರಿ 479 ಡ್ರೋನ್‌ಗಳಿಂದ ರಷ್ಯಾ ದಾಳಿ

ಎಪಿ
Published 9 ಜೂನ್ 2025, 16:00 IST
Last Updated 9 ಜೂನ್ 2025, 16:00 IST
   

ಕೀವ್‌: ಉಕ್ರೇನ್ ಮೇಲೆ 479 ಡ್ರೋನ್‌ಗಳಿಂದ ರಷ್ಯಾ ದಾಳಿ ನಡೆಸಿದೆ ಎಂದು ಉಕ್ರೇನ್‌ ವಾಯುಪಡೆಯು ಸೋಮವಾರ ಹೇಳಿದೆ.

ವಿವಿಧ ರೀತಿಯ 20 ಕ್ಷಿಪಣಿಗಳಿಂದಲೂ ದೇಶದ ವಿವಿಧೆಡೆ ದಾಳಿ ನಡೆಸಲಾಗಿದೆ. ದೇಶದ ಕೇಂದ್ರ ಮತ್ತು ಪಶ್ಚಿಮದ ಪ್ರದೇಶಗಳನ್ನು ಗುರಿಯಾಗಿಸಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅದು ತಿಳಿಸಿದೆ.

ದೇಶದ ವಾಯು ರಕ್ಷಣಾ ವ್ಯವಸ್ಥೆಯು 277 ಡ್ರೋನ್‌ಗಳು ಮತ್ತು 19 ಕ್ಷಿಪಣಿಗಳನ್ನು ನಾಶ ಮಾಡಿದೆ. ರಷ್ಯಾದ 10 ಡ್ರೋನ್‌ ಅಥವಾ ಕ್ಷಿಪಣಿಗಳು ಮಾತ್ರ ತಮ್ಮ ಗುರಿಯನ್ನು ತಲುಪಿವೆ ಎಂದು ವಾಯುಪಡೆಯು ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿ ಮಾತ್ರ ದಾಳಿ ಮಾಡಲಾಗುತ್ತಿದೆ ಎಂದು ರಷ್ಯಾ ಪ್ರತಿಕ್ರಿಯೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.