ADVERTISEMENT

ಉಕ್ರೇನಿನ ಯುದ್ಧನೌಕೆ, ಹಾರ್ಪೂನ್‌ ಕ್ಷಿಪಣಿ ಧ್ವಂಸ

ಒಡೆಸಾ ಬಂದರಿನ ಮೇಲೆ ರಷ್ಯಾಪಡೆಗಳಿಂದ ನೌಕಾ ಕ್ಷಿಪಣಿ ದಾಳಿ

​ಪ್ರಜಾವಾಣಿ ವಾರ್ತೆ
Published 24 ಜುಲೈ 2022, 16:26 IST
Last Updated 24 ಜುಲೈ 2022, 16:26 IST

ಮಾಸ್ಕೊ (ರಾಯಿಟರ್ಸ್‌/ಎಪಿ):ಉಕ್ರೇನಿನ ಒಡೆಸಾ ಬಂದರು ಮೇಲೆ ಕ್ಷಿಪಣಿ ದಾಳಿ ನಡೆಸಿರುವ ರಷ್ಯಾ ಪಡೆ, ಉಕ್ರೇನ್‌ ಯುದ್ಧನೌಕೆ ಮತ್ತು ಅಮೆರಿಕ ಪೂರೈಸಿದ ಹಡಗು ನಿಗ್ರಹಿಸುವ ಹಾರ್ಪೂನ್‌ ಕ್ಷಿಪಣಿಗಳನ್ನು ಭಾನುವಾರ ಧ್ವಂಸಗೊಳಿಸಿದೆ.

ರಷ್ಯಾದ ದೀರ್ಘ ಶ್ರೇಣಿಯ ನಿಖರ-ನಿರ್ದಿಷ್ಟ ನೌಕಾ ಕ್ಷಿಪಣಿಗಳು, ಒಡೆಸಾ ಬಂದರಿನಲ್ಲಿ ಲಂಗರು ಹಾಕಿದ್ದ ಉಕ್ರೇನ್‌ ಯುದ್ಧನೌಕೆ ಮತ್ತು ಹಾರ್ಪೂನ್‌ ಕ್ಷಿಪಣಿಗಳ ಗೋದಾಮು ನಾಶಪಡಿಸಿವೆ ಎಂದು ರಕ್ಷಣಾ ಸಚಿವಾಲಯ ವಕ್ತಾರ ಐಗೋರ್‌ ಕೊನಶೆಂಕೊವ್‌ ನೀಡಿರುವ ಮಾಹಿತಿ ಉಲ್ಲೇಖಿಸಿ ರಷ್ಯಾದ ಸುದ್ದಿಸಂಸ್ಥೆ ವರದಿ ಮಾಡಿದೆ.

ಒಡೆಸಾ ಬಂದರಿನ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸುವ ಮೂಲಕ, ಕಪ್ಪು ಸಮುದ್ರದ ಬಂದರು ಮೂಲಕ ಆಹಾರ ಧಾನ್ಯಗಳ ರಫ್ತು ನಿರ್ಬಂಧಿಸದಿರುವ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಒಂದೇ ದಿನದಲ್ಲಿ ಉಲ್ಲಂಘಿಸಿದೆ ಎಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಕಿಡಿಕಾರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.