ADVERTISEMENT

ಭಾರತಕ್ಕೆ ಆಗಮಿಸಿದ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್

ಪಿಟಿಐ
Published 31 ಮಾರ್ಚ್ 2022, 16:12 IST
Last Updated 31 ಮಾರ್ಚ್ 2022, 16:12 IST
ಸೆರ್ಗೆ ಲಾವ್ರೊವ್
ಸೆರ್ಗೆ ಲಾವ್ರೊವ್   

ನವದೆಹಲಿ: ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ಎರಡು ದಿನಗಳ ಭೇಟಿಗಾಗಿ ಗುರುವಾರ ಭಾರತಕ್ಕೆ ಆಗಮಿಸಿದರು. ಕಳೆದ ತಿಂಗಳು ಉಕ್ರೇನ್ ಮೇಲೆ ರಷ್ಯಾ ಆಕ್ರಮಣವನ್ನು ಆರಂಭಿಸಿದ ನಂತರ ಇದು ಭಾರತಕ್ಕೆ ಅವರ ಮೊದಲ ಭೇಟಿಯಾಗಿದೆ.

ಲಾವ್ರೊವ್ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾರಿಯಾ ಜಖರೋವಾ ತಿಳಿಸಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೊರಡಿಸಿರುವ ಲಾವ್ರೊವ್ ಅವರ ಭೇಟಿಯ ಮಾಧ್ಯಮ ಪ್ರಕಟಣೆಯಲ್ಲಿ ರಷ್ಯಾದ ವಿದೇಶಾಂಗ ಸಚಿವರು ಮತ್ತು ಪ್ರಧಾನಿ ನಡುವಿನ ಯಾವುದೇ ಸಭೆಯನ್ನು ಉಲ್ಲೇಖಿಸಿಲ್ಲ. ಮಾತುಕತೆಯ ಸಿದ್ಧತೆಗಳ ಬಗ್ಗೆ ತಿಳಿದಿರುವ ಮೂಲಗಳು, ರಷ್ಯಾದಿಂದ ವಿವಿಧ ಮಿಲಿಟರಿ ಯಂತ್ರಾಂಶಗಳು ಮತ್ತು ಎಸ್-400 ಕ್ಷಿಪಣಿ ವ್ಯವಸ್ಥೆಗಳ ಘಟಕಗಳನ್ನು ಸಮಯೋಚಿತವಾಗಿ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು ಭಾರತವು ಒತ್ತಡ ಹೇರುವ ಸಾಧ್ಯತೆಯಿದೆ ಎಂದು ಹೇಳಿವೆ.

ADVERTISEMENT

ರಷ್ಯಾ ವಿದೇಶಾಂಗ ಸಚಿವರು ಎರಡು ದಿನಗಳ ಚೀನಾ ಪ್ರವಾಸ ಮುಗಿಸಿ ಭಾರತಕ್ಕೆ ಆಗಮಿಸಿದ್ದಾರೆ.

ಉಕ್ರೇನ್ ಜೊತೆಗಿನ ಸಂಘರ್ಷವನ್ನು ರಾಜತಾಂತ್ರಿಕತೆ ಮತ್ತು ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಲು ಭಾರತ, ರಷ್ಯಾವನ್ನು ಒತ್ತಾಯಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.