ADVERTISEMENT

ಬಾಹ್ಯಾಕಾಶ ಆಯೋಗ, ಇಸ್ರೊ ಅಧ್ಯಕ್ಷರಾಗಿ ಸೋಮನಾಥ್‌ ನೇಮಕ

ಪಿಟಿಐ
Published 13 ಜನವರಿ 2022, 7:17 IST
Last Updated 13 ಜನವರಿ 2022, 7:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಇಸ್ರೊ,ಬಾಹ್ಯಾಕಾಶ ಆಯೋಗದ ಅಧ್ಯಕ್ಷರನ್ನಾಗಿ ಮತ್ತುಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿಎಸ್‌.ಸೋಮನಾಥ್‌ ಅವರನ್ನು ಕೇಂದ್ರ ಸರ್ಕಾರ ಬುಧವಾರ ನೇಮಕ ಮಾಡಿದೆ.

ಸೋಮನಾಥ್‌ ಅವರು ಪ್ರಸ್ತುತ ವಿಕ್ರಮ್‌ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ (ವಿಎಸ್‌ಎಸ್‌ಸಿ) ನಿರ್ದೇಶಕರಾಗಿದ್ದಾರೆ.

ಸೋಮನಾಥ್‌ ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಮೂರು ವರ್ಷಗಳವರೆಗೆ ಅವರ ಅವಧಿ ಇರುತ್ತದೆ.

ADVERTISEMENT

ಕೆ.ಶಿವನ್ ಅಧಿಕಾರ ಅವಧಿ ಜನವರಿ 14ರಂದು ಕೊನೆಗೊಳ್ಳಲಿದ್ದು ಅವರ ಉತ್ತರಾಧಿಕಾರಿಯಾಗಿ ಸೋಮನಾಥ್‌ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.