ಶಬರಿಮಲೆ: ಮಕರವಿಳಕ್ಕು ಉತ್ಸವಕ್ಕಾಗಿ ಶಬರಿಮಲೆ ಅಯ್ಯಪ್ಪ ದೇವಾಲಯ ಸೋಮವಾರ ಮತ್ತೆ ತೆರೆಯಲಿದ್ದು, ಭಕ್ತರಿಗೆ ದರ್ಶನ ಸಿಗಲಿದೆ.
ದೇಗುಲದ ಪ್ರಧಾನ ಅರ್ಚಕ ಎಸ್. ಅರುಣ್‌ಕುಮಾರ್ ನಂಬೂದಿರಿ, ತಂತ್ರಿ ಕಂಡರಾರು ರಾಜೀವರ ಸಮ್ಮುಖದಲ್ಲಿ ಸಂಜೆ 4 ಗಂಟೆಗೆ ದೇಗುಲದ ಬಾಗಿಲು ತೆರೆಯಲಿದೆ.
ಯಾತ್ರಿಗಳು ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಪವಿತ್ರ 18 ಮೆಟ್ಟಿಲುಗಳನ್ನು ಏರಬಹುದು ಎಂದು ದೇಗುಲದ ಅಧಿಕಾರಿಗಳು ತಿಳಿಸಿದ್ದಾರೆ.
ಮಂಡಲ ಪೂಜೆಯ ನಂತರ ‘ಹರಿವರಾಸನಂ’ ಪಠಣದೊಂದಿಗೆ ದೇಗುಲದ ಬಾಗಿಲನ್ನು ಡಿ. 26ರಂದು ಮುಚ್ಚಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.