ADVERTISEMENT

ಅಯ್ಯಪ್ಪ ದೇಗುಲ ಪ್ರವೇಶಿಸಲು ಪೊಲೀಸ್ ಭದ್ರತೆ ಕೇಳಿದ ಮಹಿಳೆ

ಏಜೆನ್ಸೀಸ್
Published 5 ನವೆಂಬರ್ 2018, 14:24 IST
Last Updated 5 ನವೆಂಬರ್ 2018, 14:24 IST
   

ಪಂಬಾ/ಶಬರಿಮಲೆ: ‘ಚಿತ್ತಿರ ಆಟ್ಟವಿಶೇಷಂ’ ಅಂಗವಾಗಿ ಬಾಗಿಲುತೆರೆದ ಶಬರಿಮಲೆಯ ಅಯ್ಯಪ್ಪ ದೇಗುಲದ ಬಳಿ ಹೋಗಲು ಪಂಬಾಕ್ಕೆ ತಲುಪಿದ ಮಹಿಳೆಯೊಬ್ಬರು ಭದ್ರತೆ ಒದಗಿಸುವಂತೆ ಪೊಲೀಸರ ಬಳಿ ಮನವಿ ಮಾಡಿದ್ದಾರೆ.

ಚೆರ್ತಾಲ ನಿವಾಸಿಯಾದ ಮಂಜು ಎಂಬ ಮಹಿಳೆ ತಮ್ಮಪತಿ ಹಾಗೂ ಮಕ್ಕಳ ಜೊತೆ ಪಂಬಾಕ್ಕೆ ತೆರಳಿದ್ದಾರೆ.

ಪಂಬಾಪೊಲೀಸ್ ಠಾಣೆಯಲ್ಲಿ ಮಂಜು ಅವರಿಗೆ ದೇಗುಲದ ಬಳಿಯಿರುವ ಸದ್ಯದ ಪರಿಸ್ಥಿತಿಯನ್ನು ವಿವರಿಸಿದ ಪೊಲೀಸರು, ಅಲ್ಲಿಗೆ ಕರೆದೊಯ್ಯುವುದುಅಸಾಧ್ಯ ಎಂದು ಹೇಳಿದ್ದಾರೆ.

ADVERTISEMENT

ಹೆಚ್ಚುವರಿ ಭದ್ರತೆ
ಈ ಪ್ರದೇಶದಲ್ಲಿ ಬೆದರಿಕೆ ಪರಿಸ್ಥಿತಿ ಇರುವುದರಿಂದದೇವರ ದರ್ಶನ ಪಡೆಯಲು ತೆರಳುವ ಎಲ್ಲಾ ಭಕ್ತರಿಗೆಹೆಚ್ಚುವರಿ ಭದ್ರತೆ ಕಲ್ಪಿಸಲಾಗಿದೆ ಎಂದುಶಬರಿಮಲೆಯ ಭದ್ರತಾ ವ್ಯವಸ್ಥೆಗೆ ನಿಯೋಜನೆಗೊಂಡಿರುವ ಐಜಿ ಅಜಿತ್ ಕುಮಾರ್ ತಿಳಿಸಿರುವುದಾಗಿ ಎಎನ್‌ಐ ಟ್ವೀಟ್ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.