ADVERTISEMENT

ಕಳಪೆ ಆಹಾರದ ಸೆಲ್ಫಿ ವಿಡಿಯೊ ಮಾಡಿದ್ದ ಬಿಎಸ್‌ಎಫ್ ಯೋಧ ಮೋದಿ ವಿರುದ್ಧ ಕಣಕ್ಕೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2019, 16:45 IST
Last Updated 31 ಮಾರ್ಚ್ 2019, 16:45 IST
   

ಲಖನೌ:ಗಡಿಯಲ್ಲಿ ಕಾವಲು ಕಾಯುವಬಿಎಸ್‌ಎಫ್‌ (ಗಡಿ ಭದ್ರತಾ ಪಡೆ) ಯೋಧರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿಸೆಲ್ಫಿ ವಿಡಿಯೊ ಅಪ್‌ಲೋಡ್ ಮಾಡುವಮೂಲಕ ದೇಶದ ಗಮನ ಸೆಳೆದಿದ್ದ ತೇಜ್‌ ಬಹದ್ದೂರ್ ಯಾದವ್, ಇದೀಗ ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೊಡೆತಟ್ಟಲು ಸಜ್ಜಾಗಿದ್ದಾರೆ.

‘ಯಾವುದೇ ಪಕ್ಷದ ಗುಲಾಮನಾಗಲು ನನಗೆ ಇಷ್ಟವಿಲ್ಲ, ಪಕ್ಷೇತರನಾಗಿ ಕಣಕ್ಕೆ ಇಳಿಯುತ್ತೇನೆ. ಜಯಗಳಿಸುವ ವಿಶ್ವಾಸವಿದೆ’ ಎಂಬುದು ಅವರ ವಿಶ್ವಾಸ.‘ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹಲವು ಪಕ್ಷಗಳು ನನ್ನ ಮನವೊಲಿಸಲು ಮುಂದೆ ಬಂದಿದ್ದವು. ಆದರೆ ನಾನು ಸ್ವತಂತ್ರ ಅಭ್ಯರ್ಥಿಯಾಗಿಯೇ ನಿಲ್ಲಲು ನಿರ್ಧರಿಸಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಸಶಸ್ತ್ರ ಪಡೆಗಳಲ್ಲಿರುವ ಭ್ರಷ್ಟಾಚಾರ ಬಗ್ಗೆ ಜನರ ಗಮನ ಸೆಳೆಯುವುದು ನನ್ನ ಉದ್ದೇಶ’ ಎಂದು ಯಾದವ್ ವಿವರಿಸಿದರು.

‘ನನ್ನ ವೈಯಕ್ತಿಕ ಸೋಲು ಅಥವಾ ಗೆಲುವಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಸಶಸ್ತ್ರಪಡೆಗಳನ್ನು ಅದರಲ್ಲೂ ಮುಖ್ಯವಾಗಿ ಪ್ಯಾರಾ ಮಿಲಿಟರಿ ಪಡೆಗಳನ್ನುಸರ್ಕಾರ ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದ ಬಗ್ಗೆ ಮಾತನಾಡುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಸೈನಿಕರ ಸಾಹಸವನ್ನು ಉಲ್ಲೇಖಿಸಿ ಮತ ಕೇಳುತ್ತಾರೆ ಆದರೆ ಅವರಿಗಾಗಿ ಏನನ್ನೂ ಮಾಡಲಿಲ್ಲ. ಈಚೆಗೆ ಪುಲ್ವಾಮಾದಲ್ಲಿ ಸತ್ತ ಸಿಆರ್‌ಪಿಎಫ್ ಯೋಧರನ್ನುಜನರು ಹುತಾತ್ಮರೆಂದು ಗೌರವಿದರು. ಆದರೆ ಸರ್ಕಾರ ಮಾತ್ರ ಹುತಾತ್ಮರ ಸ್ಥಾನಮಾನ ಕೊಡಲೇ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಜಮ್ಮು ಮತ್ತು ಕಾಶ್ಮೀರದಲ್ಲಿರುವಯೋಧರ ಸಮಸ್ಯೆ ಕುರಿತು ಗಮನ ಸೆಳೆಯುವ ಪ್ರಯತ್ನ ಮಾಡಿದ್ದಕ್ಕಾಗಿ ನನ್ನನ್ನು ಸೇವೆಯಿಂದ ವಜಾ ಮಾಡಿದರು. ಆದರೆ ನಾನು ಪ್ರಸ್ತಾಪಿಸಿದ ವಿಷಯಗಳ ಬಗ್ಗೆ ಸರ್ಕಾರ ಗಮನ ಹರಿಸಲೇ ಇಲ್ಲ. ಸಶಸ್ತ್ರ ಪಡೆಗಳಲ್ಲಿ ನಡೆಯುತ್ತಿರುವ ದೊಡ್ಡ ಪ್ರಮಾಣದ ಭ್ರಷ್ಟಾಚಾರದಲ್ಲಿ ಸರ್ಕಾರಕ್ಕೂ ಪಾಲಿದೆ ಎನ್ನುವುದುನನ್ನ ದನಿಯನ್ನು ತುಳಿಯಲು ನಡೆಸಿದ ಯತ್ನದಿಂದಲೇ ಗೊತ್ತಾಗುತ್ತೆ’ ಎಂದು ತೇಜ್‌ ಬಹದ್ದೂರ್ ದೂರಿದರು.

ಹರ್ಯಾಣದ ರೇವಡಿ ಪಟ್ಟಣದ ತೇಜ್ ಬಹದ್ದೂರ್,‘ಶೀಘ್ರ ವಾರಾಣಸಿಗೆ ತೆರಳಿನಿವೃತ್ತ ಯೋಧರು ಮತ್ತು ರೈತರ ನೆರವಿನಿಂದ ಮೋದಿ ವಿರುದ್ಧ ಪ್ರಚಾರದಲ್ಲಿ ತೊಡಗಿಕೊಳ್ಳುತ್ತೇನೆ. ಅತಿ ಹೆಚ್ಚಿನ ಸಂಖ್ಯೆಯ ಮತದಾರರನ್ನು ಸೆಳೆಯಲು ಕಾರ್ಯತಂತ್ರ ರೂಪಿಸುತ್ತಿದ್ದೇನೆ’ ಎಂದು ವಿವರಿಸಿದರು.

ತೇಜ್‌ ಬಹದ್ದೂರ್ ಮಾಡಿದ್ದ ಸೆಲ್ಫಿ ವಿಡಿಯೊ ಇಲ್ಲಿದೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.