ADVERTISEMENT

ಒತ್ತಡ ನಿಯಂತ್ರಿಸಲು ವಿದ್ಯಾರ್ಥಿಗಳಿಗೆ ಸದ್ಗುರು ಸಲಹೆ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2025, 13:05 IST
Last Updated 15 ಫೆಬ್ರುವರಿ 2025, 13:05 IST
ಸದ್ಗುರು ಜಗ್ಗಿ ವಾಸುದೇವ್‌
ಸದ್ಗುರು ಜಗ್ಗಿ ವಾಸುದೇವ್‌   

ನವದೆಹಲಿ: ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಮುನ್ನ ಒತ್ತಡ ನಿವಾರಣೆ ಮತ್ತು ಸುಲಭದ ಕಲಿಕೆಗೆ ಅನುವಾಗುವ ಸಲಹೆಗಳನ್ನು ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್‌ ಅವರು ಶನಿವಾರ ನೀಡಿದರು.

ಪ್ರಧಾನ ಮಂತ್ರಿಯವರ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸದ್ಗುರು, ಅತಿಯಾಗಿ ಚಿಂತಿಸುವುದನ್ನು ನಿಯಂತ್ರಿಸುವುದು ಹೇಗೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

‘ಇಲ್ಲಿಯವರೆಗೆ ಶಾಲೆಯಲ್ಲಿ ನಿಮ್ಮ ಫಲಿತಾಂಶ ಉತ್ತಮವಾಗಿ ಇಲ್ಲದಿದ್ದರೂ ಪರವಾಗಿಲ್ಲ. ಪಠ್ಯಪುಸ್ತಕಗಳು ನಿಮ್ಮ ಬುದ್ಧಿವಂತಿಕೆಗೆ ಸವಾಲಲ್ಲ. ಅನಗತ್ಯವಾಗಿ ಒತ್ತಡವನ್ನು ತೆಗೆದುಕೊಳ್ಳುತ್ತಿದ್ದೀರಿ. ಕಲಿಕೆಯನ್ನು ಸುಲಭವಾಗಿ ತೆಗೆದುಕೊಂಡರೆ, ಪಠ್ಯಪುಸ್ತಕಗಳು ಸವಾಲೇನೂ ಆಗಿರುವುದಿಲ್ಲ’ ಎಂದು ಸದ್ಗುರು ಹೇಳಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.