ADVERTISEMENT

ಸಾಧ್ವಿಯಿಂದ ‘ಮೌನ ಪ್ರಾಯಶ್ಚಿತ್ತ’

​ಪ್ರಜಾವಾಣಿ ವಾರ್ತೆ
Published 20 ಮೇ 2019, 16:48 IST
Last Updated 20 ಮೇ 2019, 16:48 IST
ಪ್ರಜ್ಞಾ ಸಿಂಗ್‌
ಪ್ರಜ್ಞಾ ಸಿಂಗ್‌   

ಭೋಪಾಲ್‌: ತಮ್ಮ ಹೇಳಿಕೆಗಳ ಮೂಲಕ ದೇಶದ ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಕ್ಕೆ ಪ್ರಾಯಶ್ಚಿತ್ತವಾಗಿ 21 ಪ್ರಹರಗಳ (42 ಗಂಟೆ) ಕಾಲ ಮೌನ ಆಚರಣೆ ನಡೆಸುವುದಾಗಿ ಭೋಪಾಲ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್‌ ಸೋಮವಾರ ಹೇಳಿದ್ದಾರೆ.

‘ಚುನಾವಣೆ ಮುಗಿದು ಈಗ ಧ್ಯಾನದ ಸಮಯ ಬಂದಿದೆ. ನನ್ನ ಮಾತುಗಳಿಂದ ದೇಶಭಕ್ತರಿಗೆ ನೋವಾಗಿದ್ದರೆ ಅದಕ್ಕಾಗಿ ಕ್ಷಮೆ ಯಾಚಿಸುತ್ತೇನೆ. ಸಾರ್ವಜನಿಕ ಜೀವನದಲ್ಲಿರುವುದರಿಂದ ಪ್ರಾಯಶ್ಚಿತ್ತದ ರೂಪದಲ್ಲಿ 21 ಪ್ರಹರಗಳ ಕಾಲ ಮೌನ ಆಚರಿಸಿ, ಕಠೋರ ಧ್ಯಾನ ನಡೆಸುತ್ತೇನೆ’ ಎಂದು ಪ್ರಜ್ಞಾ ಟ್ವೀಟ್‌ ಮಾಡಿದ್ದಾರೆ.

‘ಗಾಂಧಿಯ ಹತ್ಯೆ ಮಾಡಿದ್ದ ಗೋಡ್ಸೆಯನ್ನು ‘ದೇಶಭಕ್ತ’ ಎಂದು ಕರೆದಿರುವುದಕ್ಕಾಗಿ ಸಾಧ್ವಿಯನ್ನು ಎಂದಿಗೂ ಕ್ಷಮಿಸಲಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದರು. ಈ ಕಾರಣಕ್ಕೆ ಸಾಧ್ವಿ ಅವರು ಪ್ರಾಯಶ್ಚಿತ್ತ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.