ADVERTISEMENT

ನಾಗರಾಜಪ್ಪ ಅವರ ‘ಅನುಶ್ರೇಣಿ- ಯಜಮಾನಿಕೆ’ ಶ್ರೇಷ್ಠ ಕೃತಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2018, 18:35 IST
Last Updated 5 ಡಿಸೆಂಬರ್ 2018, 18:35 IST

ನವದೆಹಲಿ: ಶ್ರೇಷ್ಠ ಕೃತಿಗಳಿಗೆ ನೀಡಲಾಗುವ ಕೇಂದ್ರ ಸಾಹಿತ್ಯ ಅಕಾಡೆಮಿಯ 2018ನೇ ಸಾಲಿನ ಪ್ರಶಸ್ತಿಗೆ ಕನ್ನಡದ ಕೆ.ಜಿ.ನಾಗರಾಜಪ್ಪ ಅವರ ‘ಅನುಶ್ರೇಣಿ– ಯಜಮಾನಿಕೆ’ ವಿಮರ್ಶಾ ಕೃತಿ ಆಯ್ಕೆಯಾಗಿದೆ.

ಪರೇಶ ನರೇಂದ್ರ ಕಾಮತ್‌ ಅವರ ‘ಚಿತ್ರಲಿಪಿ’ ಕವನ ಸಂಕಲನವನ್ನು ಕೊಂಕಣಿ ವಿಭಾಗದಲ್ಲಿ ಆಯ್ಕೆ ಮಾಡಲಾಗಿದೆ.

ತಲಾ ₹ 1 ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿರುವ ಈ ಪ್ರಶಸ್ತಿಯನ್ನು 2019ರ ಜನವರಿ 29ರಂದು ನವದೆಹಲಿಯಲ್ಲಿ ನಡೆಯಲಿರುವ ಸಾಹಿತ್ಯೋತ್ಸವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಅವರು ಹೇಳಿದರು.

ADVERTISEMENT

ಡಾ.ತಾರಿಣಿ ಶುಭದಾಯಿನಿ, ಪ್ರೊ.ಬಸವರಾಜ ಡೋಣೂರ ಹಾಗೂ ಚಿದಾನಂದ ಸಾಲಿ ಅವರಿದ್ದ ಆಯ್ಕೆ ಸಮಿತಿ ಕನ್ನಡ ವಿಭಾಗದ ಕೃತಿಯನ್ನು, ದತ್ತಾ ದಾಮೋದರ ನಾಯ್ಕ, ಎನ್‌.ಶಿವದಾಸ್‌ ಹಾಗೂ ಎಸ್‌.ಎಂ. ಕೃಷ್ಣರಾವ್‌ ಅವರಿದ್ದ ಸಮಿತಿಯು ಕೊಂಕಣಿ ವಿಭಾಗದ ಕೃತಿಯನ್ನು ಪ್ರಶಸ್ತಿಗಾಗಿ ಶಿಫಾರಸು ಮಾಡಿತ್ತು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.