ADVERTISEMENT

ಕೋವಿಡ್‌: ಮುಂಬೈನ 6 ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ಮಾರಾಟ ಸ್ಥಗಿತ

ಪಿಟಿಐ
Published 9 ಏಪ್ರಿಲ್ 2021, 8:35 IST
Last Updated 9 ಏಪ್ರಿಲ್ 2021, 8:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ‘ಮುಂಬೈನ ಸಿಎಸ್‌ಎಂಟಿ ಸೇರಿದಂತೆ ಆರು ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ಮಾರಾಟವನ್ನು ನಿಲ್ಲಿಸಲಾಗಿದೆ’ ಎಂದುಕೇಂದ್ರೀಯ ರೈಲ್ವೆ ಅಧಿಕಾರಿಗಳು ಶುಕ್ರವಾರ ತಿಳಿಸಿದರು.

ಕೋವಿಡ್‌–19 ತೀವ್ರವಾಗಿ ಪ್ರಸರಣವಾಗುತ್ತಿದ್ದು, ಜನರು ಗುಂಪುಗೂಡುವುದನ್ನು ತಡೆಯುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಮುಂಬೈನ ಸಿಎಸ್‌ಎಂಟಿ, ಎಲ್‌ಐಟಿ, ಕಲ್ಯಾಣ್‌, ಠಾಣೆ, ದಾದರ್‌ ಮತ್ತು ಪನ್ವೇಲ್‌ ರೈಲು ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಕೇಂದ್ರೀಯ ರೈಲ್ವೆಯ ಮುಖ್ಯ ವಕ್ತಾರ ಶಿವಾಜಿ ಸುತಾರ್‌ ತಿಳಿಸಿದರು.

ADVERTISEMENT

ಕಳೆದ ತಿಂಗಳು ಕೇಂದ್ರೀಯ ರೈಲ್ವೆಯು ನಿಲ್ದಾಣಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಲು ಮಹಾರಾಷ್ಟ್ರದ 10 ಪ್ರಮುಖ ರೈಲುನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ದರವನ್ನು ₹50ಕ್ಕೆ ಏರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.