ADVERTISEMENT

EVM ಇದ್ದರೆ ಎಲ್ಲವೂ ಸಾಧ್ಯ; ಮಹಾಯುತಿ ವಿಜಯ ಬಂಪರ್ ಲಾಟರಿ ಇದ್ದಂತೆ: ಸಾಮ್ನಾ

ಪಿಟಿಐ
Published 27 ನವೆಂಬರ್ 2024, 9:43 IST
Last Updated 27 ನವೆಂಬರ್ 2024, 9:43 IST
<div class="paragraphs"><p>ಇವಿಎಂ ಮತ್ತು ವಿವಿ ಪ್ಯಾಟ್ (ಪ್ರಾತಿನಿಧಿಕ ಚಿತ್ರ)</p></div>

ಇವಿಎಂ ಮತ್ತು ವಿವಿ ಪ್ಯಾಟ್ (ಪ್ರಾತಿನಿಧಿಕ ಚಿತ್ರ)

   

ಮುಂಬೈ: ‘ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿಗೆ ಲಭಿಸಿದ ಜಯವು ಬಂಪರ್‌ ಲಾಟರಿ ಇದ್ದಂತೆ. ಆದರೆ ವಿದ್ಯುನ್ಮಾನ ಮತಯಂತ್ರ (EVM) ಬಳಕೆಯು ಅನುಮಾನ ಮೂಡಿಸಿದೆ. ಇದು ಒಂದರ್ಥದಲ್ಲಿ ‘ಇವಿಎಂ ಹೈ ತೊ ಮುಮ್ಕಿನ್‌ ಹೇ’’ ಎಂದು ಶಿವಸೇನಾ (ಯುಬಿಟಿ) ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಹೇಳಲಾಗಿದೆ.

ಭಾರತದಲ್ಲಿ ಇವಿಎಂಗಳ ಬಳಕೆ ಮತ್ತು ಮತ ಎಣಿಕೆಯಲ್ಲಿ ಅದು ತೆಗೆದುಕೊಳ್ಳುವ ಅತಿ ಕಡಿಮೆ ಸಮಯದ ಕುರಿತು ಅಮೆರಿಕದ ಉದ್ಯಮಿ ಇಲಾನ್ ಮಸ್ಕ್‌ ಇತ್ತೀಚೆಗೆ ಮಾತನಾಡಿದ್ದರು. ಜತೆಗೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಯನ್ನು ಭಾರತದ ಚುನಾವಣಾ ಪ್ರಕ್ರಿಯೆಯೊಂದಿಗೆ ಹೋಲಿಕೆ ಮಾಡಿದ್ದಾರೆ. ಆದರೆ ಭಾರತದ ನಾಗರಿಕರು ಇವಿಎಂಗಳ ಕಾರ್ಯವೈಖರಿಗೆ ಸ್ತಬ್ಧರಾಗಿದ್ದಾರೆ ಎಂದು ಬರೆಯಲಾಗಿದೆ.

ADVERTISEMENT

‘ಇವಿಎಂ ಹೊಗಳಿದ ಮಸ್ಕ್ ಕೆಲವೇ ತಿಂಗಳ ಹಿಂದೆ, ಈ ಯಂತ್ರದ ಕುರಿತು ಶಂಕೆ ವ್ಯಕ್ತಪಡಿಸಿದ್ದನ್ನು ಮರೆಯುವಂತಿಲ್ಲ. ಮಹಾರಾಷ್ಟ್ರ ವಿಧಾನಸಭೆಯ 288 ಕ್ಷೇತ್ರಗಳಲ್ಲಿ ಮಹಾಯುತಿಯು 230 ಕ್ಷೇತ್ರಗಳನ್ನು ಬಂಪರ್ ಲಾಟರಿ ಮೂಲಕ ಗೆದ್ದಿದ್ದಾರೆ. ಆದರೆ ಈ ಕುರಿತ ನಮ್ಮ ಯೋಚನೆಗಳು ಇವಿಎಂ ಹತ್ತಿರ ಬಂದು ನಿಲ್ಲುತ್ತದೆ’ ಎಂದು ಹೇಳಲಾಗಿದೆ.

ಮಹಾರಾಷ್ಟ್ರದಲ್ಲಿ ಬಳಕೆಯಾದ ಇವಿಎಂಗಳನ್ನು ಗುಜರಾತ್ ಹಾಗೂ ರಾಜಸ್ಥಾನದ ಚುನಾವಣೆಯಲ್ಲಿ ಬಳಕೆ ಮಾಡಿದ್ದು ಎಂಬುದು ಮತ್ತೊಂದು ಅಂಶ. ಸುಮಾರು 95 ಕ್ಷೇತ್ರಗಳಲ್ಲಿ ಚಲಾವಣೆಗೊಂಡ ಮತಗಳಿಗೂ, ಮತ ಎಣಿಕೆ ಸಂದರ್ಭದಲ್ಲಿ ಸಿಕ್ಕ ಲೆಕ್ಕಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಜತೆಗೆ ಇವಿಎಂಗಳ ಬ್ಯಾಟರಿಗಳೂ ಸದಾ ಭರ್ತಿಯಾಗಿರುವುದು ‘ಇವಿಎಂ ಹಗರಣ’ ಕುರಿತ ಸಂದೇಹ ಹೆಚ್ಚಿಸುತ್ತದೆ ಎಂದೆನ್ನಲಾಗಿದೆ.

‘ಮಹಾಯುತಿಗೆ ಅಷ್ಟು ಪ್ರಮಾಣದ ಸೀಟುಗಳು ಸಿಗಲು ಹೇಗೆ ಸಾಧ್ಯ ಎಂದು ಇಡೀ ರಾಷ್ಟ್ರವೇ ಮಾತನಾಡುತ್ತಿದೆ’ ಎಂದು ಸಾಮ್ನಾ ಹೇಳಿದೆ.

ಮಹಾರಾಷ್ಟ್ರ ಚುನಾವಣೆಯಲ್ಲಿ ಆಡಳಿತಾರೂಢ ಮಹಾಯುತಿಯಲ್ಲಿ ಬಿಜೆಪಿ, ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಹಾಗೂ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮಿತ್ರ ಪಕ್ಷಗಳಾಗಿವೆ. ಮತ್ತೊಂದೆಡೆ ಮಹಾ ವಿಕಾಸ ಆಘಾಡಿಯಲ್ಲಿ ಕಾಂಗ್ರೆಸ್, ಎನ್‌ಸಿಪಿ (ಎಸ್‌ಪಿ) ಮತ್ತು ಶಿವಸೇನಾ (ಯುಬಿಟಿ) ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.