ADVERTISEMENT

ಲೋಕಸಭಾ ಚುನಾವಣೆ: ಸಮಾಜವಾದಿ ಪಾರ್ಟಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಏಜೆನ್ಸೀಸ್
Published 8 ಮಾರ್ಚ್ 2019, 7:22 IST
Last Updated 8 ಮಾರ್ಚ್ 2019, 7:22 IST
   

ಲಖನೌ: ಸಮಾಜವಾದಿ ಪಕ್ಷವುಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದೆ.

ಈ ಪಟ್ಟಿಯಲ್ಲಿ ಪಕ್ಷದ ಹಿರಿಯ ಮುಖಂಡ ಮುಲಾಯಮ್ ಸಿಂಗ್ ಯಾದವ್ ಸೇರಿದಂತೆ ಆರು ಅಭ್ಯರ್ಥಿಗಳ ಹೆಸರಿದೆ. ಮುಲಾಯಮ್ ಸಿಂಗ್, ಮೈನ್‌ಪುರಿ ಲೋಕಸಭಾ ಚುನಾವಣಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಇನ್ನು ಮುಲಾಯಮ್ ಸಿಂಗ್ ಅವರ ಕುಟುಂಬಸ್ಥರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಅವರ ಸೋದರಳಿಯ ಧರ್ಮೇಂದ್ರ ಬದೌನ್‌ನಿಂದ, ಅವರ ಸಹೋದರ ಮತ್ತು ಪಕ್ಷದ ಹಿರಿಯ ಮುಖಂಡ ರಾಮ್‌ ಗೋಪಾಲ್ ಯಾದವ್ ಮಗ ಅಕ್ಷಯ್ ಯಾದವ್ ಫಿರೋಜಾಬಾದ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.

ADVERTISEMENT

ಕಮಲೇಶ್ ಕಥೇರಿಯಾ – ಇಟಾ, ಶಬೀರ್ ವಾಲ್ಮೀಕಿ – ಬೆಹ್ರಾಚ್, ಭಾಯ್ ಲಾಲ್ – ರಾಬರ್ಟ್‌ಗಂಜ್‌ನಲ್ಲಿ ಚುನಾವಣೆ ಎದುರಿಸಲಿದ್ದಾರೆ.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಒಳಗೊಂಡಂತೆ ಒಟ್ಟು 15ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಗುರುವಾರ ಬಿಡುಗಡೆಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.