ADVERTISEMENT

‘ಸಂಸದ ರತ್ನ’ ಪ್ರಶಸ್ತಿಗೆ 13 ಸಂಸದರ ಹೆಸರು

ಪಿಟಿಐ
Published 21 ಫೆಬ್ರುವರಿ 2023, 12:49 IST
Last Updated 21 ಫೆಬ್ರುವರಿ 2023, 12:49 IST
ಸಂಸತ್
ಸಂಸತ್   

ನವದೆಹಲಿ (ಪಿಟಿಐ): ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ, ಆರ್‌ಜೆಡಿಯ ಮನೋಜ್‌ ಝಾ ಮತ್ತು ಸಿಪಿಐ (ಎಂ)ನ ಜಾನ್‌ ಬ್ರಿಟ್ಟಾಸ್‌ ಅವರು ಸೇರಿ 13 ಸಂಸದರನ್ನು 2023ನೇ ಸಾಲಿನ ಸಂಸದ ರತ್ನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

ಡಾ.ಹೀನಾ ವಿಜಯಕುಮಾರ್‌ ಗವಿತ್‌ (ಬಿಜೆಪಿ, ಮಹಾರಾಷ್ಟ್ರ), ಗೋಪಾಲ್‌ ಚಿನಯ್ಯ ಶೆಟ್ಟಿ (ಬಿಜೆಪಿ, ಮಹಾರಾಷ್ಟ್ರ), ರಾಮ್‌ಸಿಂಗ್‌ ಕೊಲ್ಹೆ (ಎನ್‌ಸಿಪಿ, ಮಹಾರಾಷ್ಟ್ರ) ಸೇರಿದಂತೆ ಲೋಕಸಭೆಯ ಎಂಟು ಮತ್ತು ರಾಜ್ಯಸಭೆಯ ಐದು ಸಂಸದರ (ಮೂವರು ನಿವೃತ್ತರು) ಹೆಸರನ್ನು ಪಟ್ಟಿ ಮಾಡಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೇಂದ್ರ ರಾಜ್ಯ ಖಾತೆ ಸಚಿವ ಅರುಣ್‌ ರಾಮ್ ಮೇಘ್ವಾಲ್ ಮತ್ತು ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ಕೃಷ್ಣಮೂರ್ತಿ ಅವರನ್ನು ಒಳಗೊಂಡ ತೀರ್ಪುಗಾರರ ಸಮಿತಿಯು ಇಲಾಖೆ ಸಂಬಂಧಿತ ಎರಡು ಸ್ಥಾಯಿ ಸಮಿತಿ ಮತ್ತು ಗೌರವಾನ್ವಿತ ನಾಯಕರನ್ನು ವಿಶೇಷ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.