ADVERTISEMENT

ಅಕ್ರಮ ಆಸ್ತಿಗಳಿಕೆ ಪ್ರಕರಣ: ವಿ.ಕೆ.ಶಶಿಕಲಾ ಶೀಘ್ರದಲ್ಲೇ ಬಿಡುಗಡೆ ಸಾಧ್ಯತೆ

ಪಿಟಿಐ
Published 5 ಸೆಪ್ಟೆಂಬರ್ 2020, 14:20 IST
Last Updated 5 ಸೆಪ್ಟೆಂಬರ್ 2020, 14:20 IST
ವಿ.ಕೆ.ಶಶಿಕಲಾ
ವಿ.ಕೆ.ಶಶಿಕಲಾ   

ಚೆನ್ನೈ:ಆದಾಯಕ್ಕೂ ಮೀರಿದ ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಜೈಲಿನಲ್ಲಿ ನಾಲ್ಕು ವರ್ಷಗಳ ಶಿಕ್ಷೆ ಅನುಭವಿಸುತ್ತಿರುವಜಯಲಲಿತಾ ಆಪ್ತರಾಗಿದ್ದ ವಿ.ಕೆ. ಶಶಿಕಲಾ, ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಅವರ ಪರ ವಕೀಲ ಎನ್‌.ರಾಜಾ ಸೆಂತೂರ್‌ ಪಾಂಡಿಯನ್‌ ತಿಳಿಸಿದ್ದಾರೆ.

ಇದೇ ವೇಳೆ ಶಶಿಕಲಾ ಅವರನ್ನು ಪಕ್ಷದಿಂದ ಹೊರಗಿಡುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಎಐಎಡಿಎಂಕೆ ತಿಳಿಸಿದೆ.

‘ನಿಯಮಗಳ ಪ್ರಕಾರ ಸನ್ನಡತೆಗೆ ಪ್ರತಿ ತಿಂಗಳಿಗೆ ಮೂರು ದಿನಗಳ ಶಿಕ್ಷೆ ಇಳಿಕೆಯಾಗಲಿದೆ. ಇಲ್ಲಿಯವರೆಗೂ ಅವರು 43 ತಿಂಗಳು ಜೈಲಿನಲ್ಲಿ ಕಳೆದಿದ್ದು, 129 ದಿನಗಳ ಜೈಲು ಶಿಕ್ಷೆ ಇಳಿಕೆಗೆ ಅವರು ಅರ್ಹರಾಗಿದ್ದಾರೆ. ಇದನ್ನು ಇಲ್ಲಿಯವರೆಗೂ ಯಾರಿಗೂ ನಿರಾಕರಿಸಿಲ್ಲ’ ಎಂದು ರಾಜಾ ತಿಳಿಸಿದ್ದಾರೆ.

ADVERTISEMENT

ಹೀಗಾಗಿ 2021ರ ಜನವರಿ ಬದಲಾಗಿ ಇದೇ ಮಾಸಾಂತ್ಯದಲ್ಲಿ ಅವರು ಬಿಡುಗಡೆಯಾಗುವ ಸಾಧ್ಯತೆ ಇದೆ. ನ್ಯಾಯಾಲಯದ ಆದೇಶದಂತೆ ₹10 ಕೋಟಿ ದಂಡ ಪಾವತಿಗೆ ಎಲ್ಲ ಪ್ರಯತ್ನ ಮಾಡಲಾಗುತ್ತಿದೆ ಎಂದು ರಾಜಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.