ADVERTISEMENT

ಸೌದಿಯಲ್ಲಿ ಮೃತಪಟ್ಟ ಕೇರಳದ ರಫೀಕ್‌; ಆತನ ಮನೆ ತಲುಪಿದ್ದು ಶ್ರೀಲಂಕಾ ಮಹಿಳೆಯ ಶವ!

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 11:28 IST
Last Updated 21 ಮಾರ್ಚ್ 2019, 11:28 IST
   

ತಿರುವನಂತಪುರಂ: ಹೃದಯಾಘಾತದಿಂದ ಕಳೆದ ತಿಂಗಳು ಸೌದಿ ಅರೇಬಿಯಾದಲ್ಲಿ ಮೃತಪಟ್ಟಿದ್ದ ಭಾರತದ ರಫೀಕ್‌(28) ಅವರ ಮೃತ ದೇಹಕ್ಕಾಗಿ ಸಂಬಂಧಿಕರು ಕಾದಿದ್ದರು. ಊರು ಸೇರಿದ ಶವ ಪೆಟ್ಟಿಯನ್ನು ತೆರೆಯುತ್ತಿದ್ದಂತೆ ಮನೆಮಂದಿಗೆಲ್ಲ ಆಘಾತ ಕಾದಿತ್ತು. ಆ ಪೆಟ್ಟಿಗೆಯಲ್ಲಿ ಮಹಿಳೆ ಶವವಿತ್ತು.

ಕೊನ್ನಿ ಊರಿನವರಾದ ರಫೀಕ್‌ ಮೃತ ದೇಹಕ್ಕಾಗಿ ಕಾಯುತ್ತಿದ್ದವರಿಗೆ ಮಹಿಳೆಯೊಬ್ಬರ ದೇಹ ದೊರೆತಿತ್ತು. ಶವ ಬದಲಾವಣೆ ಆಗಿರುವುದಾಗಿ ಸ್ಥಳೀಯ ಪೊಲೀಸ್‌ ಠಾಣೆಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಫೆ.28ರಂದು ಸೌದಿ ಅರೇಬಿಯಾದಲ್ಲಿ ರಫೀಕ್‌ ಮೃತಪಟ್ಟಿದ್ದರು. ಅವರ ಮೃತದೇಹ ಇದೆ ಎನ್ನಲಾದ ಪೆಟ್ಟಿಗೆಕಳೆದ ರಾತ್ರಿ ಕೇರಳದ ಕೊನ್ನಿ ತಲುಪಿದೆ. ಆದರೆ, ಶವಪೆಟ್ಟಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಕಂಡುಬಂದಿದೆ. ಅದು ಶ್ರೀಲಂಕಾ ಮೂಲದ ಮಹಿಳೆಯ ಮೃತದೇಹವೆಂದು ಪೊಲೀಸರು ಗುರುತಿಸಿದ್ದಾರೆ.

ADVERTISEMENT

ಮಹಿಳೆಯ ಮೃತದೇಹವನ್ನು ಕೊಟ್ಟಾಯಂ ಮೆಡಿಕಲ್‌ ಕಾಲೇಜು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ ಹಾಗೂ ಮರಳಿ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.