ನವದೆಹಲಿ: ‘ಆನೆ ಕಾರಿಡರ್‌ಗಳಿಗೆ ಹೊಂದಿಕೊಂಡಂತೆ ನಿರ್ಮಿಸಲಾಗಿರುವ ರೆಸಾರ್ಟ್‌ಗಳ ಸುತ್ತ ಹಾಕಲಾಗಿರುವ ವಿದ್ಯುತ್ ಬೇಲಿ ಮತ್ತು ಮುಳ್ಳು ಬೇಲಿಗಳನ್ನು ತಕ್ಷಣವೇ ತೆಗೆಸಿ’ ಎಂದು ತಮಿಳುನಾಡು ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳಿಗೆಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
‘ಆನೆ ಕಾರಿಡಾರ್‌ಗಳ ಬಳಿ ವಿದ್ಯುತ್ ಬೇಲಿ ಮತ್ತು ಮುಳ್ಳು ಬೇಲಿಗಳಿದ್ದರೆ ಆನೆಗಳಿಗೆ ಗಾಯಗಳಾಗುವ ಅಪಾಯವಿರುತ್ತದೆ. ಹೀಗಾಗಿ ಅವುಗಳನ್ನು ತೆಗೆಯಬೇಕು’ ಎಂದು ನ್ಯಾಯಮೂರ್ತಿಗಳಾದ ಮದನ್ ಲೋಕೂರ್, ಅಬ್ದುಲ್ ನಜೀರ್ ಮತ್ತು ದೀಪಕ್ ಗುಪ್ತಾ ಅವರಿದ್ದ ಪೀಠವು ಅಭಿಪ್ರಾಯಪಟ್ಟಿದೆ.
ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಆನೆ ಕಾರಿಡಾರ್ ಪ್ರದೇಶದಲ್ಲಿ ತಲೆಎತ್ತಿರುವ 27 ರೆಸಾರ್ಟ್‌ಗಳನ್ನು ನಿರ್ಮೂಲನೆ ಮಾಡುವಂತೆ ಅಲ್ಲಿನ ಜಿಲ್ಲಾಡಳಿತಕ್ಕೆ ಪೀಠವು ಈ ಹಿಂದೆಯೇ ಸೂಚನೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.