ADVERTISEMENT

ಗುಜರಾತ್ ಗಲಭೆ: ಮೋದಿ ವಿರುದ್ಧದ ಅರ್ಜಿ ವಿಚಾರಣೆಗೆ ಸುಪ್ರಿಂಕೋರ್ಟ್ ಅಸ್ತು

ಪಿಟಿಐ
Published 3 ಡಿಸೆಂಬರ್ 2018, 7:49 IST
Last Updated 3 ಡಿಸೆಂಬರ್ 2018, 7:49 IST
   

ನವದೆಹಲಿ: ಗುಜರಾತ್‌ನ ಗಲಭೆಗಳಿಗೆ ಸಂಬಂಧಿಸಿದಂತೆ2002ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರಿಗೆ ವಿಶೇಷ ತನಿಖಾ ತಂಡವು (ಎಸ್‌ಐಟಿ) ‘ದೋಷಮುಕ್ತ’ ಎಂದು ಕ್ಲೀನ್ ಚಿಟ್ ನೀಡಿರುವುದನ್ನು ಪ್ರಶ್ನಿಸಿ ಝಾಕಿಯಾ ಜಫ್ರಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್‌ ಜನವರಿ ಮೂರನೇ ವಾರದಲ್ಲಿ ವಿಚಾರಣೆ ನಡೆಸಲಿದೆ.

ಗೋಧ್ರಾ ಗಲಭೆ ವೇಳೆ ಮೃತಪಟ್ಟ ಮಾಜಿ ಸಂಸದ ಇಶಾನ್ ಜಫ್ರಿ ಅವರ ಪತ್ನಿ ಝಾಕಿಯಾ,ಎಸ್‌ಐಟಿ ನಿರ್ಧಾರ ಪ್ರಶ್ನಿಸಿಗುಜರಾತ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ ಅಕ್ಟೋಬರ್ 5, 2017ರಂದು ಈ ಅರ್ಜಿಯನ್ನು ತಳ್ಳಿಹಾಕಿತ್ತು.ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಇದೀಗ ಅವರು ಸುಪ್ರೀಂಕೋರ್ಟ್‌ ಮೆಟ್ಟಿಲು ತುಳಿದಿದ್ದಾರೆ.

ನ್ಯಾಯಮೂರ್ತಿ ಎ.ಎಂ.ಖಾನ್‌ವಿಲ್ಕಾರ್ ಮತ್ತು ನ್ಯಾಯಮೂರ್ತಿ ಹೇಮಂತ್ ಗುಪ್ತ ಅವರಿದ್ದ ವಿಭಾಗೀಯ ಪೀಠವು ಜನವರಿ ಮೂರನೇ ವಾರಕ್ಕೆ ವಿಚಾರಣೆಯನ್ನು ಮುಂದೂಡಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.