ADVERTISEMENT

ಜ್ಞಾನವಾಪಿ ಪ್ರಕರಣ ಮಧ್ಯಂತರ ಆದೇಶಕ್ಕೆ‘ಸುಪ್ರೀಂ’ ನಕಾರ

ಮಾಹಿತಿ ಇಲ್ಲದೇ ಆದೇಶ ನೀಡಲಾಗದು–ಸುಪ್ರೀಂ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 13 ಮೇ 2022, 22:00 IST
Last Updated 13 ಮೇ 2022, 22:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಉತ್ತರ ಪ್ರದೇಶದ ವಾರಾಣಸಿಯ ಜ್ಞಾನವಾಪಿ –ಶೃಂಗಾರ ಗೌರಿ ಸಂಕೀರ್ಣಕ್ಕೆ ಸಂಬಂಧಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಧ್ಯಂತರ ಆದೇಶ ನೀಡಲು ಸುಪ್ರೀಂ ಕೋರ್ಟ್‌ ಶುಕ್ರವಾರ ನಿರಾಕರಿಸಿತು.

ಆದರೆ, ಜ್ಞಾನವಾಪಿ ಸಂಕೀರ್ಣದ ಸಮೀಕ್ಷೆ ವಿರೋಧಿಸಿ ಮುಸ್ಲಿಮರು ಸಲ್ಲಿಸಿರುವ ಅರ್ಜಿಯ ವಿಚಾರಣೆಗೆ ಪಟ್ಟಿ ಮಾಡಲು ಕೋರ್ಟ್ ಸಮ್ಮತಿಸಿತು. ಶೀಘ್ರ ವಿಚಾರಣೆಗೆ ಪರಿಗಣಿಸಬೇಕೆಂಬ ಮನವಿಗೆ ‘ನೋಡೋಣ’ ಎಂದೂ ಪೀಠ ಪ್ರತಿಕ್ರಿಯಿಸಿತು.

‘ಸದ್ಯ, ಈ ಬಗ್ಗೆ ನಮಗೆ ಏನೂ ತಿಳಿದಿಲ್ಲ. ಮಧ್ಯಂತರ ಆದೇಶ ನೀಡುವುದು ಹೇಗೆ? ಮೊದಲು ತಿಳಿಯುತ್ತೇವೆ ನೋಡೋಣ’ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಹೇಳಿದರು.

ADVERTISEMENT

ಸಹಕಾರ: ಜ್ಞಾನವಾಪಿ ಸಂಕೀರ್ಣದಲ್ಲಿ ಸ್ಥಗಿತಗೊಂಡಿದ್ದ ವಿಡಿಯೊ ಚಿತ್ರೀಕರಣ ಸಮೀಕ್ಷೆಯು ಶನಿವಾರ ಪುನರಾರಂಭವಾಗಲಿದೆ. ಸ್ಥಳೀಯ ನ್ಯಾಯಾಲಯವು ನಿಯೋಜಿಸಿದ ತಂಡದೊಂದಿಗೆ ಸಹಕರಿಸುವುದಾಗಿಮಸೀದಿ ಆಡಳಿತ ಸಮಿತಿ ಶುಕ್ರವಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.