ADVERTISEMENT

ಆನ್‌ಲೈನ್‌ ಗೇಮ್‌: ರಾಜ್ಯದ ಮೇಲ್ಮನವಿ ವಿಚಾರಣೆಗೆ ‘ಸುಪ್ರೀಂ’ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 15:27 IST
Last Updated 16 ಸೆಪ್ಟೆಂಬರ್ 2022, 15:27 IST
ಸಾಂದರ್ಭಿ ಚಿತ್ರ
ಸಾಂದರ್ಭಿ ಚಿತ್ರ   

ನವದೆಹಲಿ:ಆನ್‌ಲೈನ್ ಗೇಮ್‌ ಹೆಸರಲ್ಲಿ ನಡೆಯುವ ಜೂಜಾಟ ನಿಷೇಧಿಸುವ ಕಾನೂನು ರದ್ದು ಮಾಡಿ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಫೆ.14ರಂದು ನೀಡಿರುವ ಆದೇಶವನ್ನು ಪ್ರಶ್ನಿಸಿ, ಕರ್ನಾಟಕ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಶುಕ್ರವಾರ ನಿರ್ಧರಿಸಿದೆ.

ಈ ಸಂಬಂಧ ನ್ಯಾಯಮೂರ್ತಿಗಳಾದ ಎಸ್‌.ಅಬ್ದುಲ್‌ ನಜೀರ್‌ ಮತ್ತು ವಿ.ರಾಮಸುಬ್ರಮಣಿಯನ್‌ ಅವರಿದ್ದ ನ್ಯಾಯಪೀಠ, ಆನ್‌ಲೈನ್‌ ಗೇಮ್‌ ಕೈಗಾರಿಕಾ ಒಕ್ಕೂಟ ಅಖಿಲ ಭಾರತ ಗೇಮಿಂಗ್‌ ಫೆಡರೇಷನ್‌ ಮತ್ತು ಕೌಶಲ ಆಧಾರಿತ ಗೇಮಿಂಗ್‌ ಸಂಸ್ಥೆಗಳಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಲಾಗಿದೆ.

ಇಂಥದ್ದೇ ಪ್ರಕರಣದಲ್ಲಿ ಮದ್ರಾಸ್‌ ಹೈಕೋರ್ಟ್‌ ಆದೇಶದ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿರುವ ಮೇಲ್ಮನವಿಯೊಂದಿಗೆ ಈ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT