ADVERTISEMENT

ಕೇಂದ್ರದ ‘ಒಂದು ಶ್ರೇಣಿ, ಒಂದು ಪಿಂಚಣಿ’ ನೀತಿಯನ್ನು ಪ್ರಶ್ನಿಸಿದ ಸುಪ್ರೀಂಕೋರ್ಟ್‌

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2022, 18:39 IST
Last Updated 16 ಫೆಬ್ರುವರಿ 2022, 18:39 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ:ಸಶಸ್ತ್ರ ಪಡೆಗಳಲ್ಲಿನ ‘ಒಂದು ಶ್ರೇಣಿ, ಒಂದು ಪಿಂಚಣಿ’ (ಒಆರ್‌ಒಪಿ) ನೀತಿ ಕುರಿತು ಕೇಂದ್ರ ಸರ್ಕಾರವನ್ನು ಬುಧವಾರ ಪ್ರಶ್ನಿಸಿರುವ ಸುಪ್ರೀಂಕೋರ್ಟ್, ವಾಸ್ತವವಾಗಿ ನೀಡಿದ್ದಕ್ಕಿಂತ ಹೆಚ್ಚಿನದ್ದನ್ನು ಕೊಟ್ಟಿರುವುದಾಗಿ ಹೇಳುತ್ತಿರುವುದು ಅತಿಶಯೋಕ್ತಿ ಎಂದು ಹೇಳಿದೆ.

ನ್ಯಾಯಾಲಯ ಇದೇ ವೇಳೆ ಕೇಂದ್ರದ ‘ಮಾರ್ಪಡಿಸಿದ ಅಶ್ಯೂರ್ಡ್ ಕೆರಿಯರ್ ಪ್ರೋಗ್ರೆಷನ್’ (ಎಂಎಸಿಪಿ) ಯೋಜನೆಯನ್ನೂ ಪ್ರಶ್ನಿಸಿದೆ.

‘ಕೇಂದ್ರ ಸರ್ಕಾರವು ಒಆರ್‌ಒಪಿ ನೀತಿಯನ್ನು ಹೇಗೆ ಜಾರಿಗೊಳಿಸಿದೆ ಮತ್ತು ಸೈನಿಕರಿಗೆ ಯಾವ ಪ್ರಯೋಜನಗಳನ್ನು ವಿಸ್ತರಿಸಿದೆ’ ಎಂದುನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್‌, ಸೂರ್ಯಕಾಂತ್‌, ವಿಕ್ರಮ್‌ನಾಥ್‌ ಅವರನ್ನೊಳಗೊಂಡ ಪೀಠ ಕೇಳಿದೆ.

ADVERTISEMENT

ಕೇಂದ್ರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್. ವೆಂಕಟರಾಮನ್‌ ಹಾಜರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.