ADVERTISEMENT

ಹಿಂದೂ, ಬೌದ್ಧ, ಸಿಖ್‌ ಧರ್ಮೀಯರಿಗೆ ಮಾತ್ರ ಎಸ್‌ಸಿ ಮೀಸಲಾತಿ: ದೇವೇಂದ್ರ ಪಢಣವೀಸ್‌

ಪಿಟಿಐ
Published 18 ಜುಲೈ 2025, 13:59 IST
Last Updated 18 ಜುಲೈ 2025, 13:59 IST
ದೇವೇಂದ್ರ ಪಢಣವೀಸ್‌
ದೇವೇಂದ್ರ ಪಢಣವೀಸ್‌   

ಮುಂಬೈ: ಹಿಂದೂ, ಬೌದ್ಧ ಅಥವಾ ಸಿಖ್‌ ಧರ್ಮೀಯರ ಹೊರತಾಗಿ ಬೇರೆಯವರು ಪರಿಶಿಷ್ಟ ಜಾತಿಯ(ಎಸ್‌ಸಿ) ಪ್ರಮಾಣ‍ಪತ್ರ ಹೊಂದಿದ್ದರೆ ಅದನ್ನು ರದ್ದುಗೊಳಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಪಢಣವೀಸ್‌ ಅವರು ಗುರುವಾರ ಹೇಳಿದ್ದಾರೆ.

‘ಅಂತಹ ವ್ಯಕ್ತಿಗಳು ಸರ್ಕಾರಿ ನೌಕರಿ ಅಥವಾ ಇತರ ಸೌಲಭ್ಯಗಳನ್ನು ಎಸ್‌ಸಿ ಮೀಸಲಾತಿಯಡಿ ಪಡೆದಿದ್ದರೆ ಕ್ರಮ ಕೈಗೊಳ್ಳಲಾಗುವುದು. ಅಕ್ರಮವಾಗಿ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ‍ಪಡೆದು ಚುನಾವಣೆಯಲ್ಲಿ ಗೆಲುವು ಪಡೆದಿದ್ದರೆ ಅದನ್ನೂ ಅನೂರ್ಜಿತಗೊಳಿಸಲಾಗುವುದು’ ಎಂದು ಪಢಣವೀಸ್‌ ಅವರು ವಿಧಾನಪರಿಷತ್‌ನಲ್ಲಿ ಹೇಳಿದ್ದಾರೆ.

‘ಬಲವಂತವಾಗಿ ಅಥವಾ ವಂಚಿಸಿ ಮತಾಂತರ ನಡೆಸುವವರ ವಿರುದ್ಧ ಕ್ರಮಕ್ಕೆ ಕಠಿಣ ಕಾನೂನುಗಳನ್ನು ಜಾರಿಗೊಳಿಸುತ್ತೇವೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಕ್ರಿಪ್ಟೊ ಕ್ರಿಶ್ಚಿಯನ್‌’ಗಳಿಂದ (ದಾಖಲೆಗಳ ಪ್ರಕಾರ ಬೇರೆ ಧರ್ಮದಲ್ಲಿದ್ದು, ಕ್ರಿಶ್ಚಿಯನ್‌ ಧರ್ಮವನ್ನು ಪಾಲಿಸುವವರು) ಧಾರ್ಮಿಕ ಸ್ವಾತಂತ್ರ್ಯದ ದುರುಪಯೋಗವಾಗುತ್ತಿದೆ. ಅವರು ಎಸ್‌ಸಿ ಮೀಸಲಾತಿಯಡಿ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ’ ಎಂದು ಬಿಜೆಪಿ ಶಾಸಕ ಅಮಿತ್‌ ಗೊರ್ಖೆ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.