ADVERTISEMENT

ಸರ್ಕಾರಿ ನಿಯಂತ್ರಣದ ದೇಗುಲಗಳಲ್ಲಿ ಅವ್ಯವಹಾರ: ಪುರಾವೆ ಕೇಳಿದ ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2022, 15:35 IST
Last Updated 1 ಸೆಪ್ಟೆಂಬರ್ 2022, 15:35 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ:ಸಾರ್ವಜನಿಕರಿಂದ ಬೃಹತ್ ಪ್ರಮಾಣದ ಕಾಣಿಕೆ ಸ್ವೀಕರಿಸುವ ಕೆಲ ಪ್ರಮುಖ ದೇವಾಲಯಗಳನ್ನು ನಿಯಮಗಳಿಂದ ಹೊರಗಿಡಬೇಕೇ ಎಂದು ಅಚ್ಚರಿ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌,ಸರ್ಕಾರಿ ನಿಯಂತ್ರಣದ ಮಂದಿರಗಳ ಅಸಮರ್ಪಕ ನಿರ್ವಹಣೆ ಅಥವಾ ಹಣದ ದುರುಪಯೋಗದ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ಪುರಾವೆಗಳನ್ನು ನೀಡಬೇಕಾಗುತ್ತದೆ ಎಂದು ಹೇಳಿದೆ.

ಮುಸ್ಲಿಂ ಮತ್ತು ಕ್ರಿಶ್ಚಿಯನ್ನರಂತೆಯೇ ಹಿಂದೂಗಳು, ಜೈನರು ಮತ್ತು ಸಿಖ್ಖರು ತಮ್ಮ ದೇಗುಲಗಳನ್ನು ನಿರ್ವಹಿಸುವ ಹಕ್ಕು ನೀಡಬೇಕೆಂದು ಕೋರಿ ಅಶ್ವಿನಿ ಕುಮಾರ್ ಉಪಾಧ್ಯಾಯ ಎಂಬುವವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಕೋರ್ಟ್‌ ನಡೆಸಿತು.

‘ನಮಗೆ 150 ವರ್ಷಗಳ ಇತಿಹಾಸವಿದೆ. ಈ ಪೂಜಾ ಸ್ಥಳಗಳು ಸಮಾಜದ ದೊಡ್ಡ ಅಗತ್ಯಗಳನ್ನು ಪೂರೈಸಿವೆಯೇ ಹೊರತು ತಮ್ಮ ಉದ್ದೇಶಕ್ಕಾಗಿ ಅಲ್ಲ. ಕೆಲ ದೇವಾಲಯಗಳು ಸಾರ್ವಜನಿಕ ಉದ್ದೇಶಗಳಿಗೆ ತಮ್ಮ ಭೂಮಿಯನ್ನು ನೀಡಿವೆ’ ಎಂದು ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಮತ್ತು ನ್ಯಾಯಮೂರ್ತಿ ಎಸ್. ರವೀಂದ್ರ ಭಟ್ ತಿಳಿಸಿದೆ.

ADVERTISEMENT

ಉಪಾಧ್ಯಾಯ ಪರ ಹಾಜರಾದ ಹಿರಿಯ ವಕೀಲ ಅರವಿಂದ್ ದಾತಾರ್ ಮತ್ತು ಗೋಪಾಲ್ ಶಂಕರನಾರಾಯಣನ್ ಅವರಿಗೆ ಹೆಚ್ಚುವರಿ ಮಾಹಿತಿ ಸಲ್ಲಿಸಲು ನ್ಯಾಯಾಲಯವು ಎರಡು ವಾರಗಳ ಕಾಲಾವಕಾಶವನ್ನು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.