ADVERTISEMENT

ಕೋರ್ಟ್‌ ಕಲಾಪ ಭೌತಿಕವಾಗಿ ಆರಂಭ: ‘ಸುಪ್ರೀಂ’ನಿಂದ ಒಂದೆರಡು ದಿನದಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 13:49 IST
Last Updated 12 ಆಗಸ್ಟ್ 2020, 13:49 IST
ಸುಪ್ರೀಂ ಕೋರ್ಟ್ (ಪ್ರಾತಿನಿಧಿಕ ಚಿತ್ರ)
ಸುಪ್ರೀಂ ಕೋರ್ಟ್ (ಪ್ರಾತಿನಿಧಿಕ ಚಿತ್ರ)   

ನವದೆಹಲಿ: ಕೋರ್ಟ್‌ಗಳ ಕಲಾಪವನ್ನು ಭೌತಿಕವಾಗಿ ಆರಂಭಿಸುವ ಕುರಿತಂತೆ ಸುಪ್ರೀಂಕೋರ್ಟ್‌ ಒಂದೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಿದೆ.

ಸುಪ್ರೀಂಕೋರ್ಟ್‌ನ ಏಳು ಜನ ನ್ಯಾಯಾಧೀಶರನ್ನು ಒಳಗೊಂಡ ಸಮಿತಿಯು ವಕೀಲರ ಸಂಘಗಳ ಪ್ರತಿನಿಧಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಂಗಳವಾರ ನಭೆ ನಡೆಸಿದೆ. ವೈದ್ಯರ ಸಲಹೆಯನ್ನು ಪಡೆದು, ಕಲಾಪಗಳನ್ನು ಭೌತಿಕವಾಗಿಯೇ ನಡೆಸಲು ಅನುಮತಿ ನೀಡುವಂತೆ ವಕೀಲರು ಸಭೆಗೆ ಮನವಿ ಮಾಡಿದರು.

ನ್ಯಾಯಾಧೀಶರ ಸಮಿತಿಯ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಎನ್‌.ವಿ.ರಮಣ, ಸುಪ್ರೀಂಕೋರ್ಟ್‌ ಬಾರ್‌ ಅಸೋಸಿಯೇಶನ್‌ನ ಅಧ್ಯಕ್ಷ ದುಷ್ಯಂತ್‌ ದವೆ, ಬಾರ್‌ಕೌನ್ಸಿಲ್‌ ಆಫ್‌ ಇಂಡಿಯಾದ ಚೇರಮನ್‌ ಮನನ್‌ ಕುಮಾರ್‌ ಮಿಶ್ರಾ, ಹಿರಿಯ ವಕೀಲ ಶಿವಾಜಿ ಎಂ.ಜಾಧವ್‌ ಸಭೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.